Saturday, November 23, 2024
ಸುದ್ದಿ

ಹ್ಯಾಕರ್ ಹಾವಳಿಗೆ ಫೇಸ್‌ಬುಕ್ ತುತ್ತು: 5 ಕೋಟಿ ಫೇಸ್‌ಬುಕ್ ಅಸುರಕ್ಷಿತ – ಕಹಳೆ ನ್ಯೂಸ್

ಕ್ಯಾಲಿಫೋರ್ನಿಯಾ: ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್ ಮತ್ತೆ ಹ್ಯಾಕರ್‌ಗಳ ಹಾವಳಿಗೆ ತುತ್ತಾಗಿದೆ. ಹ್ಯಾಕರ್‌ಗಳ ಹಾವಳಿಯಿಂದ 5 ಕೋಟಿ ಫೇಸ್‌ಬುಕ್ ಖಾತೆಗಳು ಅಸುರಕ್ಷತಗೊಂಡಿವೆ ಈ ಬಗ್ಗೆ ಮಾಹಿತಿ ನೀಡಿರುವ ಫೇಸ್‌ಬುಕ್ ಕಚೇರಿ, ಭದ್ರತಾ ಲೋಪದಿಂದಾಗಿ 5 ಕೋಟಿ ಫೇಸ್‌ಬುಕ್ ಖಾತೆಗಳು ತೊಂದರೆಗೀಡಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಫೇಸ್‌ಬುಕ್‌ನ ‘ವೀವ್ ಆಸ್’ ಎಂಬ ಆಯ್ಕೆಯನ್ನು ಹ್ಯಾಕರ್‌ಗಳು ತಮ್ಮ ಸುಪರ್ಧಿಗೆ ತೆಗೆದುಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಹೀಗಾಗಿ ೫ ಕೋಟಿ ಫೇಸ್‌ಬುಕ್ ಖಾತೆಗಳು ತೊಂದರೆಗೊಳಗಾಗಿದೆ ಎಂದು ಫೇಸ್‌ಬುಕ್ ಮೂಲ ಕಚೇರಿ ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೇಸ್‌ಬುಕ್‌ನ ಎಂಜಿನಿಯರ್ ತಂಡವೊಂದು ಮಂಗಳವಾರದಂದು ಫೇಸ್‌ಬುಕ್‌ನ ಕೆಲವು ಖಾತೆಗಳಲ್ಲಿ ಭದ್ರತಾ ಸಮಸ್ಯೆ ಎದುರಾಗಿರುತ್ತಿರುವುದನ್ನು ಗಮನಿಸಿತು ತನಿಖೆಯ ನಂತರ 5 ಕೋಟಿ ಫೇಸ್‌ಬುಕ್ ಖಾತೆಗಳು ಈ ರೀತಿಯ ಸಮಸ್ಯೆ ಎದುರಿಸುತ್ತಿರುವುದಾಗಿ ಅರಿವಿಗೆ ಬಂದಿದೆ. ಈ ಬಗ್ಗೆ ದೂರು ನೀಡಿದ್ದೇವೆ ಹಾಗೂ ಸಮಸ್ಯೆ ಸರಿಪಡಿಸುತಿದ್ದೇವೆ ಎಂದು ಹೇಳಿದೆ.