Thursday, January 23, 2025
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಪ್ರೀತಿ ಹೆಸರಲ್ಲಿ ದೋಖಾ – ಲವ್ ಜಿಹಾದ್‌ಗೆ ಯತ್ನಿಸಿದ ಮುಸ್ಲಿಂ ಯುವಕನಿಂದ ಹಿಂದೂ ಯುವತಿ ಅಪಾಯಕ್ಕೆ ಸಿಲುಕುವ ಮುನ್ನವೆ ಬಚಾವ್ – ಕಹಳೆ ನ್ಯೂಸ್

ಆನೇಕಲ್: ಇತ್ತೀಚೆಗೆ ದೆಹಲಿ (NewDelhi), ಕೇರಳ (Kerala) ಸೇರಿದಂತೆ ಕೆಲ ರಾಜ್ಯಗಳಲ್ಲಿ ನಡೆದ ಲವ್ ಜಿಹಾದ್ (Love Jihad) ಪ್ರಕರಣಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಗಳು ಮಾಸುವ ಮುನ್ನವೇ ರಾಜ್ಯ ರಾಜಧಾನಿಗೂ ಲವ್ ಜಿಹಾದ್ ಗಾಳಿ ಬೀಸಿದೆ. ಅನ್ಯ ಕೋಮಿನ ಯುವಕ ತನ್ನ ಧರ್ಮವನ್ನೇ ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಕೊನೆಗೆ ವಂಚಕನ ಬಣ್ಣ ಬಯಲಾಗಿದ್ದು, ಅಪಾಯಕ್ಕೆ ಸಿಲುಕುವ ಮುನ್ನವೆ ಯುವತಿ ಲವ್ ಜಿಹಾದ್ ಕೂಪದಿಂದ ಪಾರಾಗಿದ್ದಾಳೆ.

ಹೌದು. ತಾನು ಕ್ರಿಶ್ಚಿಯನ್ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನ ಬಲೆಗೆ ಬಿಳಿಸಿದ್ದ ಯುವಕ ಮುಸ್ಲಿಂ ಎಂಬ ವಿಚಾರ ತಿಳಿಯುತ್ತಿದ್ದಂತೆ ಲವ್ ಜಿಹಾದ್ ಎಂದು ಶಂಕಿಸಿ ಯುವತಿ ಎಚ್ಚೆತ್ತುಕೊಂಡು ಬಚಾವ್ ಆಗಿದ್ದಾಳೆ. ಆದರೆ ಆತನ ಕಿರುಕುಳ ತಾಳಲಾರದೇ ರಕ್ಷಣೆ ಮತ್ತು ನ್ಯಾಯಕ್ಕಾಗಿ ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾರಾಷ್ಟ್ರ ಮೂಲದ ಹಿಂದೂ ಯುವತಿ ವಂಚನೆಗೊಳಗಾಗಿದ್ದು, ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಎಂಬಾತ ಯುವತಿಯನ್ನ ವಂಚಿಸಿದ್ದಾನೆ. ಗಾರ್ಮೆಂಟ್ ರಿಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ-ಯುವತಿ ನಗರದಲ್ಲಿ ವಾಸವಾಗಿದ್ದರು. ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಪ್ರಾರಂಭದಲ್ಲಿ ತಾನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವನು ನನ್ನ ಹೆಸರು ಮೆಲ್ಬಿನ್ ಹೇಳಿ ಪರಿಚಯ ಮಾಡಿಕೊಂಡು, ಯುವತಿಯನ್ನ ಬಲೆಗೆ ಬೀಳಿಸಿದ್ದಾನೆ. ಅವನ ಮಾತು ನಂಬಿದ ಯುವತಿ ಎರಡು ವರ್ಷದಿಂದ ಪರಸ್ಪರ ಪ್ರೀತಿ, ಒಡನಾಟದಲ್ಲಿದ್ದಾಳೆ. ಹೀಗಿರುವಾಗ ಒಂದು ದಿನ ಆಕಸ್ಮಿಕವಾಗಿ ಯುವಕನ ಪರ್ಸ್ ನೋಡಿದಾಗ ಆಧಾರ್‌ಕಾರ್ಡ್ ಸಿಕ್ಕಿದ್ದು, ಅನ್ಯ ಕೋಮಿನವನು ಎಂಬು ಗೊತ್ತಾಗಿದೆ. ನಂತರ ಯುವಕ ಮುಸ್ಲಿಂ ಎಂದು ತಿಳಿದರೆ ಯುವತಿಯರು ಸ್ನೇಹ ಬೆಳೆಸುವುದಿಲ್ಲ ಅದಕ್ಕಾಗಿ ಕ್ರಿಶ್ಚಿಯನ್ ಎಂದು ಸುಳ್ಳು ಹೇಳಿರೋದಾಗಿ ಬಾಯ್ಬಿಟ್ಟಿದ್ದಾನೆ.

ಅನ್ಯ ಕೋಮಿನವನು ಎಂದು ತಿಳಿದ ಬಳಿಕ ಮದುವೆ ಸಾಧ್ಯವಿಲ್ಲ ಎಂದು ಯುವತಿ ಆತನ ಪ್ರೀತಿಯನ್ನ ತಿರಸ್ಕಾರ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಯುವಕ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ರಾತ್ರಿ ವೇಳೆ ಮನೆ ಬಳಿ ಬಂದು ಗಲಾಟೆ ಮಾಡಿ ಯುವತಿ ಮತ್ತು ಕುಟುಂಬದವರನ್ನ ಮುಗಿಸುವ ಬೆದರಿಕೆ ಹಾಕಿದ್ದಾನೆ. ಪ್ರೀತಿಯ ಹೆಸರಿನಲ್ಲಿ ಯುವತಿ ವಂಚನೆ ಮತ್ತು ಅನ್ಯಾಯಕ್ಕೊಳಗಾಗಿದ್ದು, ಪ್ರಾಣ ರಕ್ಷಣೆ ಮತ್ತು ನ್ಯಾಯಕ್ಕಾಗಿ ಹೆಬ್ಬಗೋಡಿ ಠಾಣೆಯಲ್ಲಿ ನಯವಂಚಕ ಅಲ್ ಮೆಹಪ್ಯೂಸ್ ಬರಪೂಯಾನ ವಿರುದ್ಧ ದೂರು ದಾಖಲಿಸಿದ್ದಾಳೆ.

ಇನ್ನೂ ತನ್ನ ಧರ್ಮ ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಗೆ ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಲ್ಲದೇ, ಯುವತಿಯ ಬಳಿ ಲಕ್ಷಾಂತರ ರೂಪಾಯಿ ಹಣವನ್ನೂ ಸುಲಿಗೆ ಮಾಡಿದ್ದಾನೆ. ಇದೇ ರೀತಿ ಈ ಹಿಂದೆಯೂ ಸಹ ಸಾಕಷ್ಟು ಯುವತಿಯರಿಗೆ ಸುಳ್ಳು ಹೇಳಿ ವಂಚನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕರ ಬಳಿ ಇಲ್ಲಸಲ್ಲದ ಆರೋಪ ಮಾಡಿ ಕೆಲಸ ಮಾಡುತ್ತಿದ್ದ ಯುವತಿಗೆ ಗೇಟ್ ಪಾಸ್ ಕೊಡಿಸಿದ್ದಾನೆ ಎನ್ನುವ ಆರೋಪಗಳೂ ಹೇಳಿಬಂದಿವೆ. ಈ ಸಂಬಂಧ ದೂರು ದಾಖಲಿಸಿರುವ ಯುವತಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ.