Recent Posts

Monday, January 20, 2025
ಸುದ್ದಿ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ‘ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘ ದಿನಾಚರಣೆ ಭವ್ಯ ಭಾರತದ ನಿರ್ಮಾತೃ ನಾವಾಗಬೇಕು : ಡಾ. ಧನಂಜಯಕುoಬ್ಳೆ. – ಕಹಳೆ ನ್ಯೂಸ್

ಪುತ್ತೂರು : ದೇಶದ ಬಗೆಗೆ ಪ್ರತಿಯೊಬ್ಬರಲ್ಲೂ ಸದ್ಭಾವನೆ ಮೂಡಬೇಕು. ನಮ್ಮದೇಶದ ವಿಚಾರ ಬಂದಾಗಎಲ್ಲರೂಒಟ್ಟಾಗಿ ಹೋರಾಡಬೇಕು.ಪರಸ್ಪರ ಪ್ರೀತಿ ಪ್ರೇಮ ವನ್ನು ಹಂಚಿಕೊoಡು ಬಾಳಬೇಕು ಹಾಗೂ ಭವ್ಯ ಭಾರತವನ್ನುಕಟ್ಟುವಲ್ಲಿ ಸಫಲರಾಗಿ ಸದೃಢ ಪ್ರಜೆಗಳಾಗಿ ಪ್ರಜ್ವಲಿಸಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದಎಸ್.ವಿ.ಪಿ ಕನ್ನಡಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಡಾ. ಧನಂಜಯಕುoಬ್ಳೆ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದಆಶ್ರಯದಲ್ಲಿ ನಡೆದ ‘ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘದ ದಿನಾಚರಣೆಯ ಮುಖ್ಯಅತಿಥಿಯಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ವಿದ್ಯಾಸಂಸ್ಥೆ ಕಲಿಸಿಕೊಡುವ ಆಚಾರ ವಿಚಾರ, ಸಂಸ್ಕೃತಿ ಮಹತ್ವವಾದದ್ದು.ಇಂತಹ ಹೆಮ್ಮೆಯ ಸಂಸ್ಥೆ ಕರಾವಳಿಯ ಶಾಂತಿನಿಕೇತನ ಎನಿಸಿಕೊಳ್ಳಬೇಕು.ಈ ಸಂಸ್ಥೆಯ ವಿದ್ಯಾರ್ಥಿಗಳ ಎದೆ ಬಗೆದು ನೋಡಿದಾಗ ಭಾರತಕಾಣಬೇಕು. ವಿದ್ಯಾರ್ಥಿಗಳು ಭಾವ ಭಾರತದ ಬಗ್ಗೆ ಅರಿತುಕೊಂಡುಗತವೈಭವದಕುರಿತಾದ ಭಾವನೆಯನ್ನುತಮ್ಮಲ್ಲಿ ಮೂಡಿಸಿಕೊಳ್ಳಬೇಕು.ಆಕಾಶದಿಂದ ಬಿದ್ದ ಮಳೆ ನೀರುಒಂದೇ ಸಮುದ್ರಕ್ಕೆ ಸೇರುವಂತೆ ನಾವು ಯಾವದೇವರಿಗೆ ಪೂಜೆ ಮಾಡಿದರೂಒಂದೇದೇವರಿಗೆ ಸಲ್ಲುತ್ತದೆಎಂಬುದನ್ನು ಅರಿತುಕೊಳ್ಳಬೇಕು, ಇದೇ ಭಾವ ಭಾರತಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಾರ್ಯಕ್ರಮ ಇನ್ನೋರ್ವ ಅತಿಥಿ ನಿವೃತ್ತ ಸೇನಾಧಿಕಾರಿ, ಕ್ಯಾಪ್ಟನ್ ಬ್ರಿಜೇಶ್‌ಚೌಟ ಮಾತನಾಡಿ, ವಿವೇಕಾನಂದ ಸಂಸ್ಥೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸಂಸ್ಥೆ.ನಮ್ಮ ಹಿರಿಯರು ಧಾರ್ಮಿಕ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ

.ಅದನ್ನುಕಾಪಾಡುವುದು ನಮ್ಮೆಲ್ಲರಕರ್ತವ್ಯ.ಇದಕ್ಕಾಗಿಉತ್ತಮ ನಾಯಕನಅವಶ್ಯಕತೆಯಿದೆ.ನಾಯಕತ್ವ ಸರಿಯಾಗಿದ್ದರೆ ನಾವು ಕಲ್ಪಿಸಿದ ರಾಷ್ಟ್ರ ನಿರ್ಮಾಣಖಂಡಿತವಾಗಿಯೂ ಸಾಧ್ಯಎಂದುಅಭಿಪ್ರಾಯಪಟ್ಟರು.

ಕಾರ್ಯಕ್ರಮದಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಮಾತನಾಡಿ, ಜೀವನದಲ್ಲಿ ಬೇಡದ ಸಂಗತಿಗಳನ್ನು ತೊಡೆದು ಹಾಕಿ ಬೇಕಾದ ಸಂಗತಿಗಳನ್ನು ಮಾತ್ರ ಇರಿಸಿಕೊಳ್ಳಬೇಕು.ಏನಾದರೂ ಸಾಧನೆ ಮಾಡಬೇಕಾದರೆ ಆಸಕ್ತಿ, ಕೌಶಲ್ಯ, ಪರಿಶ್ರಮದಜೊತೆಗೆಆತ್ಮವಿಶ್ವಾಸವೂಇರಬೇಕು.ಜೀವನದಲ್ಲಿ ಸೋತರೆಕುಗ್ಗದೆ ಮರಳಿ ಪ್ರಯತ್ನ ಮಾಡುತ್ತಲೇಇರಬೇಕು.ಪ್ರಯತ್ನದಿಂದಎಲ್ಲವೂ ಸಾಧ್ಯಎಂದು ನುಡಿದರು.

ಈ ಸಂದರ್ಭದಲ್ಲಿಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧದತ್ತಿನಿಧಿ ಬಹುಮಾನವನ್ನುಆಯ್ದ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷಡಾ.ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಚಾರ್ಯ ವಿಷ್ಣುಗಣಪತಿ ಭಟ್, ವಿದ್ಯಾರ್ಥಿ ಸಂಘದಅಧ್ಯಕ್ಷ ಮಂಜುನಾಥ್‌ಜೋಡುಕಲ್ಲು, ಕಾರ್ಯದರ್ಶಿ ರಕ್ಷಿತ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ನಿವೃತ್ತಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.