Friday, September 20, 2024
ಸುದ್ದಿ

ಹಿಮಾಲಯದ ಪರ್ವತವೊಂದಕ್ಕೆ ಅಜಾತಶತ್ರುವಿನ ನಾಮ – ಕಹಳೆ ನ್ಯೂಸ್

ಉತ್ತರಾಖಂಡ್‌: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆ ಹಿಮಾಲದೆತ್ತರದ್ದು… ಅದಕ್ಕೆಂದೇ ಉತ್ತರಾಖಂಡ ಸರ್ಕಾರ ಹಿಮಾಲಯ ಪರ್ವತದ ತುದಿಯೊಂದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲು ನಿರ್ಧರಿಸಿದೆ. ಉತ್ತರಾಖಂಡ ರಾಜ್ಯದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, ಈ ಕುರಿತು ಮಾಹಿತಿ ನೀಡಿದ್ದಾರೆ.

ಉತ್ತರಾಖಂಡ್‌ನ ನೆಹರೂ ಇನ್ ಸ್ಟಿಟ್ಯೂಟ್‌ನ ಪರ್ವತಾರೋಹಿಗಳ ತಂಡವೊಂದು ಇನ್ನೂ ಜಗತ್ತಿನ ಕಣ್ಣಿಗೆ ಬೀಳದ ಹಿಮಾಲಯದ ತುದಿಯೊಂದಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಆ ತುದಿಯನ್ನು ಜಗತ್ತಿಗೆ ಪರಿಚಯಿಸಿ, ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಜಪೇಯಿ ಅವರಿಗೆ ಪ್ರಕೃತಿ ಮತ್ತು ಪರ್ವತಗಳ ಮೇಲೆ ಅಗಾಧವಾದ ಪ್ರೀತಿಯಿತ್ತು. ಆದ್ದರಿಂದ ಹಿಮಾಲಯದ ತುದಿಯೊಂದಕ್ಕೆ ಅವರ ಹೆಸರನ್ನಿಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗಷ್ಟೇ, ಛತ್ತೀಸ್ಘಡದ ರಾಜಧಾನಿ ನವ ರಾಯ್ಪುರದ ಹೆಸರನ್ನು ಅಟಲ್ ನಗರ ಎಂದು ಬದಲಿಸಲು ಛತ್ತೀಸ್ ಗಢ ಸರ್ಕಾರ ನಿರ್ಧರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಜಾಹೀರಾತು

ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕೊನೆಯುಸಿರೆಳೆದರು. 93 ವರ್ಷ ವಯಸ್ಸಿನ ಅಜಾತಶತ್ರು ವಾಜಪೇಯಿ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡರೂ, ಅವರನ್ನು ಪಕ್ಷಭೇದವಿಲ್ಲದೆ ಎಲ್ಲರೂ ಗೌರವಿಸುತ್ತಿದ್ದರು ಎಂಬುದು ಗಮನೀಯ ಸಂಗತಿ.