Recent Posts

Thursday, November 21, 2024
ಸುದ್ದಿ

ತಾಯಿಯ ಕೊಂದು ಸೂಟ್ ಕೇಸ್‌ನಲ್ಲಿ ಶವಹೊತ್ತುಪೊಲೀಸ್ ಠಾಣೆಗೆ ತಂದ ಪುತ್ರಿ – ಕಹಳೆ ನ್ಯೂಸ್

ಬೆಂಗಳೂರು : ಹೆತ್ತ ತಾಯಿಯನ್ನು ಕೊಂದ ಮಗಳು, ಶವವನ್ನು ಸೂಟ್ ಕೇಸ್ ನಲ್ಲಿ ತುಂಬಿ ಠಾಣೆಗೆ ತಂದ ಭೀಕರ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಬೀವಾ ಪಾಲ್ (70) ಮೃತ ದುರ್ದೈವಿ. ಸೆನಾಲಿ ಸೇನ್(39) ಕೊಲೆ ಆರೋಪಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಕೋ ಲೇಔಟ್ ಪೊಲೀಸ್ ಠಾಣೆಯ ಬಿಳೇಕಹಳ್ಳಿಯ ಎಂಎಸ್ ಆರ್ ಅಪಾರ್ಟ್ ಮೆಂಟ್ ನಲ್ಲಿ ಮಗಳು ಸೆನಾಲಿ ಸೇನ್, ತಾಯಿ ಬೀವಾಪಾಲ್ ಹಾಗೂ ಸೆನಾಲಿ ಅತ್ತೆ ವಾಸವಾಗಿದ್ದರು. ದಿನನಿತ್ಯವೂ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ನಡುವೆ ಜಗಳವಾಗುತ್ತಿತ್ತು. ಇದನ್ನು ಕಂಡು ಸೆನಾಲಿ ಸೇನ್ ಬೇಸತ್ತು ಹೋಗಿದ್ದಳು.
ನಿನ್ನೆ ರಾತ್ರಿ ಜಗಳವಾಗಿದ್ದು, ಜಗಳದ ಬಳಿಕ ತಾಯಿ ಬೀವಾಪಲ್ (78) ನಿದ್ದೆ ಮಾತ್ರೆ ನುಂಗಿ ಸಾಯುವುದಾಗಿ ಹೇಳಿದ್ದರು. ಮುಂಜಾನೆ ತಾಯಿಗೆ ಸೋನಾಲಿ 20 ನಿದ್ದೆ ಮಾತ್ರೆ ನುಂಗಿಸಿದ್ದಾಳೆ. ಹೊಟ್ಟೆ ನೋವು ಎಂದು ಒದ್ದಾಡುತ್ತಿದ್ದಾಗ ಕುತ್ತಿಗೆ ವೇಲ್ ನ ಬಿಗಿದು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.
ನಂತರ ತಾಯಿ ಬೀವಾ ಪಾಲ್ ಅವರ ಶವವನ್ನು ಟ್ರ‍್ಯಾಲಿ ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು, ಅದರೊಂದಿಗೆ ತಂದೆಯ ಪೊಟೋವನ್ನು ಇಟ್ಟುಗೊಂಡು ಸೆನಾಲಿ ಮೈಕೋಲೇಔಟ್ ಠಾಣೆಗೆ ಆಗಮಿಸಿದ್ದಾಳೆ. ಇನ್ನು ಸೆನಾಲಿ ಕೃತ್ಯ ಕಂಡು ಮೈಕೋಲೇಔಟ್ ಪೊಲೀಸರು ಬೆಚ್ಚಬಿದ್ದಿದ್ದು ಪೊಲೀಸರು ಸೆನಾಲಿ ಸೇನ್ ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.