ಉಡುಪಿ: ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವ ಹಠಾತ್ ಆಗಿ ಕುಸಿದುಬಿದ್ದು ಮೃತಪಟ್ಟ ಘಟನೆ ಉಡುಪಿ ಎಂಜಿಎA ರಸ್ತೆಯ ಪಣಿಯಾಡಿ ದೇವಸ್ಥಾನದ ಬಳಿ ನಡೆದಿದೆ. ಮೃತ ಯುವಕನ ಹೆಸರು, ವಿಳಾಸ ತಿಳಿದುಬಂದಿಲ್ಲ. 25ರಿಂದ 30 ವರ್ಷದ ಯುವಕನೆಂದು ಗುರುತಿಸಲಾಗಿದ್ದು, ಯುವಕನ ಜೇಬಿನಲ್ಲಿ ಉಡುಪಿ ಟೂ ಕೊಲ್ಲಂ ರೈಲ್ವೆ ಟಿಕೆಟ್ ದೊರಕಿದೆ. ಸ್ಥಳಕ್ಕೆ ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್ಐ ವಿಜಯ, ಹೆಡ್ ಕಾನ್ ಸ್ಟೇಬಲ್ ಸುಷ್ಮಾ ಸ್ವರೂಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.