ಹುಬ್ಬಳ್ಳಿ:ನಗರದ ದೇಸಾಯಿ ಬ್ರೀಡ್ಜ್ ಮೇಲೆ ನಡೆದ ಹಿಟ್ ಆಂಡ್ ರನ್ ಪ್ರಕರಣವನ್ನು ಭೇದಿಸುವಲ್ಲಿ ಕಡೆಗೂ ಹುಬ್ಬಳ್ಳಿಯ ಪರ್ವ ಸಂಚಾರಿ ಪೊಲೀಸರು ಯಶಸ್ವಿಯಾಗಿದ್ದು ಲಾರಿ ಚಾಲಕನ ನಿರ್ಲಕ್ಷಕ್ಕೆ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬದವರಿಗೆ ನ್ಯಾಯ ಕೊಡಿಸುವ ಕರ್ಯವನ್ನು ಮಾಡಿದ್ದಾರೆ
ಕಳೆದ ಗುರುವಾರ ತಡ ರಾತ್ರಿ ಹುಬ್ಬಳ್ಳಿಯ ದೇಸಾಯಿ ಬ್ರೀಡ್ಜ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ನವಲಗುಂದದ ಸಿದ್ದನಗೌಡ ಹುಡೆದ ಎಂಬಾತ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದ,ಆದ್ರೆ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮರಾಗಳು ಇಲ್ಲದ ಕಾರಣ ಅಪಘಾತ ಮಾಡಿ ಪರಾರಿಯಾದ ವಾಹನ ಯಾವದು ಎಂಬುದನ್ನ ಪತ್ತೆ ಮಾಡೋದು ಪೊಲೀಸರಿಗೆ ಕೂಡಾ ತಲೆ ನೋವಾಗಿತ್ತು.
ಆದ್ರೆ ಡಿಸಿಪಿ ಗೋಪಾಲ ಬ್ಯಾಕೋಡ್ ಮರ್ಗರ್ಶನದಲ್ಲಿ ತನಿಖೆಗೆ ಇಳಿದ ಪರ್ವ ಸಂಚಾರಿ ಠಾಣೆಯ ಪಿ ಎಸ್ ಐ ಪುನೀತ್ ಹಾಗೂ ಅವರ ತಂಡ ಕೆಲವೊಂದಿಷ್ಟು ಟೆಕ್ನಿಕಲ್ ಹಾಗೂ ಮೊಬೈಲ್ ಟವರ್ ಲೋಕೇಶನ್ ಆಧಾರದ ಮೇಲೆ ಹಾಗೂ ಪೆಟ್ರೋಲ್ ಪಂಪ್ ಬಳಿ ಅನುಮಾನಾಸ್ಪದವಾಗಿ ನಿಂತು ಹೋಗಿದ್ದ ಲಾರಿಯ ಬಗ್ಗೆ ಬೆನ್ನು ಹತ್ತಿದಾಗ ಅಪಘಾತ ಮಾಡಿ ಪರಾರಿಯಾಗಿದ್ದ ಲಾರಿಯನ್ನು ವಿಜಯಪುರದಲ್ಲಿ ಪತ್ತೆ ಮಾಡುವಲ್ಲಿ ಪಿ ಎಸ್ ಐ ಪುನೀತ್ ಟೀಂ ಯಶಸ್ವಿಯಾಗಿದೆ.
ಬೈಟ್:ಡಿಸಿಪಿ ಗೋಪಾಲ ಬ್ಯಾಕೋಡ್
ಒಟ್ಟಿನಲ್ಲಿ ಸರಿಯೋ ತಪ್ಪು ಅಪಘಾತ ಮಾಡಿದ ಕೂಡಲೇ ಆತ ಬದುಕಿದ್ದಾನಾ ಅಥವಾ ಇಲ್ಲವೋ ಎಂಬುದನ್ನು ನೋಡದೆ ಲಾರಿ ಸಮೇತ ಪರಾರಿಯಾಗಿದ್ದ ಕಿರಾತಕನನ್ನು ಬಂಧನ ಮಾಡುವಲ್ಲಿ ಪರ್ವ ಸಂಚಾರಿ ಠಾಣೆಯ ಪೊಲೀಸರು ಯಶಸ್ವಿಯಾಗಿ, ಮೃತಪಟ್ಟ ಸಿದ್ದನಗೌಡ ಕುಟುಂಬದವರಿಗೆ ನ್ಯಾಯ ಕೊಡಿಸಿದ್ದಾರೆ.