Recent Posts

Tuesday, November 26, 2024
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ವಾರ್ಷಿಕೋತ್ಸವ ಹೊಸ ಸಾಧ್ಯತೆಗಳಿಗೆ ಯುವಜನಾಂಗ ತೆರೆದುಕೊಳ್ಳಬೇಕಾಗಿದೆ – ಯಶವಂತಡೋಂಗ್ರೆ : ಕಹಳೆ ನ್ಯೂಸ್

ಪುತ್ತೂರು : ಪ್ರಸ್ತುತಕಾಲಘಟ್ಟದಲ್ಲಿ ಹೊಸ ವಿನ್ಯಾಸ, ತಂತ್ರಜ್ಞಾನ ಹಾಗೂ ಕಲೆಗೆ ಭರಪೂರವಾದ ಅವಕಾಶಗಳು ಯುವಜನಾಂಗದ ಮುಂದಿದೆ. ಆದರೆ ವಿದ್ಯಾರ್ಥಿಗಳು ಇದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ರಾಷ್ಟ್ರೀಯ ಶಿಕ್ಷಣ ಪದ್ಧತಿಯಿಂದಇAದು ವಿದ್ಯಾರ್ಥಿಗಳಿಗೆ ಅವಕಾಶಗಳು ವಿಸ್ತಾರವಾಗಿದೆ. ಮುಖ್ಯವಾಗಿ ಸಂಶೋಧನೆಯಲ್ಲಿತೊಡಗಿಕೊoಡಲ್ಲಿಯಶಸ್ಸು ಗಳಿಸಬಹುದು ಎಂದು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಯಶವಂತಡೊoಗ್ರೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಕಾಲೇಜಿನ ವಾರ್ಷಿಕೋತ್ಸವಆಶ್ರಯದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ವಿಶ್ವದಯಾವುದೇ ಭಾಗಕ್ಕೆ ಹೋದರೆ ಅಲ್ಲಿನ ಮಾಹಿತಿ ಪಡೆಯುವ ಅವಕಾಶ ತಂತ್ರಜ್ಞಾನದಿoದ ಲಭಿಸುತ್ತದೆ. ಶಿಕ್ಷಣಕ್ಕೆ ಸಂಬAಧಿಸಿದ ಅನೇಕ ವಿಚಾರಗಳು ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಇಂದು ದೊರಕುತಿದೆ. ಆದ್ದರಿಂದ ನಿಮ್ಮನ್ನು ನೀವು ಹೊಸ ಜಗತ್ತಿನ ಹೊಸ ಸಾಧ್ಯತೆಗೆ ತೆರೆದುಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷಡಾ. ಪ್ರಭಾಕರ್ ಭಟ್‌ಕಲ್ಲಡ್ಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ,ಸಹನೆ, ಸತತ ಪ್ರಯತ್ನವಿದ್ದರೆಯಶಸ್ಸು ಗಳಿಸಬಹುದು. ಅದರೊಂದಿಗೆಆತ್ಮವಿಶ್ವಾಸ ಹೊಂದಿದ್ದರೆ ನಮ್ಮಕಾರ್ಯದಲ್ಲಿ ಜಯಗಳಿಸಬಹುದು.

ರಾಷ್ಟ್ರೀಯ ಶಿಕ್ಷಣ ನೀತಿ ಪದ್ಧತಿಯು ಈ ಮಣ್ಣಿನಚಿಂತನೆಯ ಶಿಕ್ಷಣವನ್ನು ವಿದ್ಯಾರ್ಥಿಗಳ ಮುಂದಿಡುತ್ತದೆ. ಹಾಗಾಗಿ ನಮ್ಮ ಚಿಂತನೆಗಳು ಬದಲಾಗಬೇಕುಅದು ಭಾರತಕ್ಕೆ ಹೊಂದಿಕೆಯಾಗುವAತಿರಬೇಕುಎAದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವಿವಿಧಕ್ಷೇತ್ರದಲ್ಲಿ ಸಾಧನೆ ಮಾಡಿದಕಾಲೇಜಿನ ವಿದ್ಯಾರ್ಥಿಗಳು ಮತ್ತುಉಪನ್ಯಾಸಕರನ್ನುಗೌರವಿಸಲಾಯಿತು.

ಈ ಸಂದರ್ಭದಲ್ಲಿಕಾಲೇಜಿನ ಪರೀಕ್ಷಾಂಗ ಕುಲಸಚಿವಡಾ.ಶ್ರೀಧರ ಎಚ್. ಜಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ‘ವಿಕಸನ’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನಆಡತ ಮಂಡಳಿಯ ಅಧ್ಯಕ್ಷಡಾ.ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ. ಎನ್, ಕಾಲೇಜಿನಪ್ರಾಂಶುಪಾಲ ಪ್ರೊ.ವಿಷ್ಣುಗಣಪತಿ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ.ಎಸ್ ಸ್ವಾಗತಿಸಿ, ಕಾಲೇಜಿನ ಪರೀಕ್ಷಾಂಗ ಕುಲ ಸಚಿವಡಾ. ಹೆಚ್ ಜಿ ಶ್ರೀಧರ್ ವಂದಿಸಿದರು, ಸ್ನಾತಕೋತ್ತರ ವಿಭಾಗದಡೀನ್‌ಡಾ. ವಿಜಯ ಸರಸ್ವತಿ ಮತ್ತು ವ್ಯವಹಾರಶಾಸ್ತ್ರ ವಿಭಾಗದ ಮುಖ್ಯಸ್ಥೆರೇಖಾ ನಿರ್ವಹಿಸಿದರು.
ಸಭಾಕಾರ್ಯಕ್ರಮದ ನಂತರ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕಕಾರ್ಯಕ್ರಮ ನಡೆಯಿತು.