ಎಂ. ಆರ್. ಅಣೆಕಟ್ಟಿನಲ್ಲಿ ನೀರು ಶೇಖರಿಸಿ ಮತ್ತು ಬಿಡುವ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಿ : ವಿದ್ಯುತ್ ಸ್ಥಾವರದ ವ್ಯವಸ್ಥಾಪಕರು –ಕಹಳೆ ನ್ಯೂಸ್
ಬಂಟ್ವಾಳ ಗ್ರಾಮದ ಶಂಭೂರು ಗ್ರಾಮದ ಮಡಿಮುಗೇರುವಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಎ.ಎಂ. ಆರ್ (AMR) ಅಣೆಕಟ್ಟಿನಲ್ಲಿ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ನೀರು ಶೇಖರಿಸಲು ಪ್ಲಾನ್ ರೂಪಿಸಿದೆ.
ಈ ಬಗ್ಗೆ ಎಂ.ಆರ್ ವಿದ್ಯುತ್ ಸ್ಥಾವರದ ವ್ಯವಸ್ಥಾಪಕರು ಮಾತಾನಾಡಿ, ನದಿ ನೀರಿನ ಮಟ್ಟ ಏರುವುದರಿಂದ ನದಿಯ ತೀರದ ಆಸುಪಾಸಿನ ಜನರು ಸೂಕ್ತ ಮುಂಜಾಗ್ರತೆ ವಹಿಸಬೇಕಾದ ಅಗತ್ಯತೆಯಿದೆ.
ಶೇಖರಿಸಿದ ನೀರನ್ನು ವಿದ್ಯುಚ್ಛಕ್ತಿ ಉತ್ಪಾದನೆಗಾಗಿ ಬಳಸಿ ಅದೇ ನೀರನ್ನು ವಾಪಸ್ ನದಿಯ ಕೆಳ ಭಾಗಕ್ಕೆ ಬಿಡಲಾಗುವುದು. ಅದಲ್ಲದೆ ಮಳೆಗಾಲ ಆರಂಭವಾದ ನಂತರ ನೀರಿನ ಒಳಹರಿವಿನ ಪ್ರಮಾಣವನ್ನು ಹೊಂದಿಕೊoಡು ಅಣೆಕಟ್ಟಿಗೆ ಅಳವಡಿಸಿದ ಗಂಟೆಗಳನ್ನು ತೆರೆದು ನೀರನ್ನು ಕೆಳಭಾಗಕ್ಕೆ ಬಿಡಲಾಗುತ್ತದೆ.
ಆದುದರಿಂದ ನದಿಯ ಅಣೆಕಟ್ಟಿನ ಮೇಲ್ಭಾಗ ಹಾಗೂ ಕೆಳಭಾಗದ ಇಕ್ಕೆಲಗಳಲ್ಲಿ ನೀರಿನ ಮಟ್ಟವು ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಏರಿಳಿತವಾಗುವುದರಿದ ನದಿಯ ದಡದಲ್ಲಿ ವಾಸಿಸಿರುವ ಜನರು ಹಾಗೂ ಅವರ ಸಾಕು ಪ್ರಾಣಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಸೂಕ್ತ ಮುಂಜಾಗ್ರತೆ ವಹಿಸಬೇಕಾಗಿ ಎ.ಎಂ. ಆರ್. ವಿದ್ಯುತ್ ಸ್ಥಾವರದ ವ್ಯವಸ್ಥಾಪಕರು ತಿಳಿಸಿದ್ದಾರೆ.