Monday, November 25, 2024
ಸುದ್ದಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಜೂನ್ 15 ರಿಂದ ಯುರೋಪ್ ಯಕ್ಷಗಾನ ಅಭಿಯಾನ –ಕಹಳೆ ನ್ಯೂಸ್

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಜೂನ್ 15 ರಿಂದ ಯುರೋಪ್ ಯಕ್ಷಗಾನ ಅಭಿಯಾನ ನಡೆಯಲಿದೆ. ಯಕ್ಷಗಾನ ಅಭಿಯಾನದಲ್ಲಿ ರಾಜ ವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀ ವೇಷ, ಹಾಸ್ಯ ವೇಷಗಳು ರಾರಾಜಿಸಲಿದ್ದು, ಯುರೋಪ್ ದೇಶದ ವಿವಿಧ ಭಾಗಗಳಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜೂನ್ ತಿಂಗಳಲ್ಲಿ ಲಂಡನ್, ಮಿಡ್ಲ್ಯಾಂಡ್, ದುರಾಅಮ್, ಲೀಡ್ಸ್, ಎಡಿನ್ ಬಗ್9, ಸ್ಕಾಟ್ಲಂಡ್ ಮೊದಲಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ಕಾಣಲಿದೆ.

ಆಗಸ್ಟ್ ತಿಂಗಳಲ್ಲಿ ಫ್ರಾನ್ಸ್, ಪ್ಯಾರಿಸ್, ಫ್ರಾಂಕ್ ಫಟ್9, ಮುನಿಚ್, ಜರ್ಮನಿ, ಬಿಲ್ಲಿಂಗಾಮ್, ದುರಾಹಮ್ ಮೊದಲಾದ ಕಡೆ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಪಣಂಬೂರು ವಾಸು ಐತಾಳ್ USA ಇವರ ನೇತೃತ್ವದಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತರೊಂದಿಗೆ ಪ್ರೋ ಎಂ ಎಲ್ ಸಾಮಗ, ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ, ಪದ್ಯಾಣ ಚಂದ್ರಶೇಖರ ಪೂಜಾರಿ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ್ ಪೂಜಾರಿ ಬೆಳ್ಳಿಪಾಡಿ ಕಲಾವಿದರು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಷ್ಠಿತ ಕನ್ನಡಿಗರು U.K. ಸಂಸ್ಥೆಯ ಆಹ್ವಾನ ಹಾಗೂ ದೇವಿಕಾ ಡ್ಯಾನ್ಸ್ ಥಿಯೇಟರ್ ಇವರ ಆಶ್ರಯದಲ್ಲಿ ಯುರೋಪ್ ಯಕ್ಷಗಾನ ಅಭಿಯಾನ ಸಂಪನ್ನಗೊಳ್ಳಲಿದೆ. ಯಕ್ಷಗಾನ ಪ್ರದರ್ಶನ ಅಲ್ಲದೆ ದುರಾಹಮ್ ಮತ್ತು ಲೀಡ್ಸ್ ಮಹಾವಿದ್ಯಾಲಯಗಳಲ್ಲಿ ಯಕ್ಷಗಾನದ ಶಿಬಿರಗಳು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು