ಮಂಗಳೂರು : ಯುವಕನೊಬ್ಬ ಯುವತಿಯೊಬ್ಬಳ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹಣ ವಸೂಲಿ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ರಂಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಯುವತಿಯೊಬ್ಬಳಿಗೆ ಫೇಸ್‌ಬುಕ್‌ನಲ್ಲಿ ರಂಜಿತ್ ಶೆಟ್ಟಿ ಪರಿಚಯವಾಗಿದ್ದ. ಇವರ ನಡುವೆ ಸ್ನೇಹ ಬೆಳೆದು, ಅನೋನ್ಯತೆಯಿಂದ ಇದ್ದರು.
ಈ ವೇಳೆ ಯುವತಿಯ ಮೊಬೈಲ್‌ನಿಂದ ಖಾಸಗಿ ಫೋಟೋ, ವೀಡಿಯೋವನ್ನು ರಂಜಿತ್ ತನ್ನ ಮೊಬೈಲ್‌ಗೆ ಕಳುಹಿಸಿದ್ದನು. ಈ ವಿಚಾರ ತಿಳಿದ ಯುವತಿ ರಂಜಿತ್‌ನಿOದ ದೂರವಾಗುತ್ತಿದ್ದಂತೆ ಆಕೆಯ ಖಾಸಗಿ ಪೋಟೋ ಮತ್ತು ವಿಡೀಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ಬೈದು, ಯುವತಿಯಿಂದ ಪ್ರತಿ ತಿಂಗಳು 20,000 ರೂ.ನಂತೆ ಹಣ ಪಡೆದುಕೊಂಡಿದ್ದಾನೆ.
ಜೊತೆಗೆ ಯುವತಿ ನಿರ್ವಹಿಸುತ್ತಿದ್ದ ಸಂಸ್ಥೆಯ ಇ-ಮೇಲ್ ಹಾಗೂ ಯುವತಿಯ ಸಹೋದ್ಯೋಗಿಗಳ ಮೊಬೈಲ್‌ಗೆ ಖಾಸಗಿ ಪೋಟೋ ಮತ್ತು ವೀಡೀಯೋಗಳನ್ನು ಕಳಿಸಿ ಮಾನಸಿಕವಾಗಿ ಹಿಂಸೆಯನ್ನು ನೀಡಿದ್ದಾನೆ. ಯುವತಿಯ ತಾಯಿ ಮನೆಗೆ ತೆರಳಿ “ನಿಮ್ಮ ಮಗಳಿಗೆ ನನ್ನೊಂದಿಗೆ ಕ್ವಾಂಟಾಕ್ಟನಲ್ಲಿ ಇರುವಂತೆ ಹೇಳಿ, ಇಲ್ಲದಿದ್ದಲ್ಲಿ ನಿಮ್ಮನ್ನು ಮುಗಿಸುತ್ತೇನೆಂದು” ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.