ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಕ್ಷೇತ್ರದ ರಕ್ಷಣೆಗಾಗಿ ವ್ಯವಸ್ಥಾಪನ ಸಮಿತಿ ವರ್ಷದ ಹಿಂದೆ ಹಾಕಿದ್ದ ಗೇಟನ್ನು ಸಾರ್ವಜನಿಕರ ದೂರಿನ ಮೇರೆಗೆ ದ.ಕ. ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರ ಉಪಸ್ಥಿತಿಯಲ್ಲಿ ತೆರವುಗೊಳಿಸಲಾಗಿದೆ.
ಸೌತಡ್ಕ ದೇಗುಲ ಬಯಲು ಆಲಯವಾಗಿರುವುದರಿಂದ ಹೊರಗೆ ಇರುವ ಗಂಟೆ ಸೇರಿದಂತೆ ಲಕ್ಷಾಂತರ ರೂ. ಬೆಲೆಬಾಳುವ ಸೊತ್ತುಗಳ, ಹುಂಡಿಯ ರಕ್ಷಣೆ ಸೇರಿದಂತೆ ದೇವಸ್ಥಾನದ ಸಮಗ್ರ ಹಿತದೃಷ್ಟಿಯಿಂದ ವ್ಯವಸ್ಥಾಪನ ಸಮಿತಿ ಚಿಂತಿಸಿ ದೇವಸ್ಥಾನದ ಹಿಂಭಾಗದ ಅನ್ನಛತ್ರದ ಬಳಿ ರಸ್ತೆಗೆ ಕಳೆದ ವರ್ಷ ಗೇಟು ಹಾಕಿ ಭದ್ರತೆ ಕಲ್ಪಿಸಿದ್ದರು.
ಆದರೆ ರಸ್ತೆಗೆ ದೇವಸ್ಥಾನದ ವತಿಯಿಂದ ಗೇಟು ಅಳವಡಿಸಿರುವುದನ್ನು ಶ್ರೀಕೃಷ್ಣ ಭಟ್ ಸೇರಿದಂತೆ ಇತರರು ಆಕ್ಷೇಪ ವ್ಯಕ್ತಪಡಿಸಿದ್ದು, ಗೇಟನ್ನು ತೆರವುಗೊಳಿಸುವಂತೆ ದ.ಕ ಜಿಲ್ಲಾಧಿಕಾರಿಗೆ ಮತ್ತು ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದರು.
ಈ ಹಿನ್ನಲೆ ದ.ಕ.ಜಿಲ್ಲಾಧಿಕಾರಿಗಳು ಸರಕಾರಿ ಸ್ಥಳದ ರಸ್ತೆಗೆ ಹಾಕಿದ ಗೇಟನ್ನು ಪರಿಶೀಲಿಸಿ ಬಳಿಕ ತೆರವುಗೊಳಿಸಿದ್ದಾರೆ.