Monday, November 25, 2024
ಸುದ್ದಿ

ಅಗಸದಲ್ಲಿ ವಿಸ್ಮಯ ಗೋಚರ : ಆಕಾಶದಲ್ಲಿ ನಕ್ಷತ್ರವೊಂದು ಚಲಿಸಿದಂತೆ ರಾಜ್ಯದ ವಿವಿಧೆಡೆ ಭಾಸ -ಕಹಳೆ ನ್ಯೂಸ್

ಆಕಾಶದಲ್ಲಿ ನಕ್ಷತ್ರವೊಂದು ಚಲಿಸಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಅನೇಕ ಚರ್ಚೆಗಳು ಕೂಡಾ ನಡೆಯುತ್ತಿದೆ. ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ಹೇಳುವ ಪ್ರಕಾರ ಇದು ಐ.ಎಸ್ಎಸ್ ನ ಸಂಚಾರ ವಾಗಿದೆ ಅಂದರೆ ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಷನ್ ಗಗನಯಾತ್ರಿಗಳು ಇರುವ ಬಾಹ್ಯಾಕಾಶ ನಿಲ್ದಾಣದ ಚಲನೆ ಭೂಮಿಯ ಮೇಲೆ ಗೋಚರವಾಗಿದೆ. ನಾಸಾ ಬಾಹ್ಯಾಕಾಶದಲ್ಲಿ ಒಂದು ಪ್ರಯೋಗಾಲಯವನ್ನು ನಿರ್ಮಾಣ ಮಾಡಿದ್ದು, ಅಮೆರಿಕ ಫ್ರಾನ್ಸ್ ರಷ್ಯದ ಏಳು ಜನ ಗಗನಯಾತ್ರಿಗಳು ಅದರೊಳಗೆ ಇದ್ದಾರೆ. ಒಂದರಿAದ ಮೂರು ವರ್ಷದವರೆಗೆ ಗಗನಯಾತ್ರಿಗಳು ಆ ನೌಕೆಯ ಒಳಗೆ ಇದ್ದು ಪ್ರಯೋಗ ಮಾಡುತ್ತಿರುತ್ತಾರೆ. ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿ ಬಾಹ್ಯಾಕಾಶ ನೌಕೆ ಚಲಿಸುತ್ತಿದ್ದು, ಬಾಹ್ಯಾಕಾಶಕ್ಕೆ ಸಂಬoಧಪಟ್ಟ ಬೇರೆ ಬೇರೆ ಪ್ರಯೋಗಗಳನ್ನು ಈ ಗಗನ ಯಾತ್ರಿಗಳು ಮಾಡುತ್ತಾರೆ. ಭೂಮಿಯಿಂದ ಬೇರೆ ಬೇರೆ ವಸ್ತುಗಳನ್ನು ಗಗನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರಯೋಗಗಳನ್ನು ಮಾಡಲಾಗ್ತ ಇದ್ದು, ಸಸ್ಯ, ಪ್ರಾಣಿ, ಕೀಟ, ಮನುಷ್ಯ ಗುರುತ್ವಾಕರ್ಷಣ ಶಕ್ತಿ ಇಲ್ಲದೆ ಬೆಳೆಯಲು ಸಾಧ್ಯವೇ ಎಂಬ ಎಲ್ಲಾ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇನ್ನೂ ನಕ್ಷತ್ರದಂತೆ ಗೋಚರವಾಗಲು ಕಾರಣ ಸೂರ್ಯಾಸ್ತ ಸಂದರ್ಭ ಗಗನ ನೌಕೆಯ ಸೋಲಾರ್ ಪ್ಲೇಟ್ ಮೇಲೆ, ಬೆಳಕು ಬಿದ್ದಾಗ ಈ ಗೋಚರವಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.