Recent Posts

Sunday, January 19, 2025
ಅಂತಾರಾಷ್ಟ್ರೀಯರಾಷ್ಟ್ರೀಯಸಿನಿಮಾಸುದ್ದಿ

ಸ್ವಿಮ್ ಸೂಟ್ ತೊಟ್ಟು ಸಖತ್ ಹಾಟ್ ಹಾಟ್ ಆಗಿ ಬಿಸಿ ನೀರಿನ ಬಗ್ಗೆ ಪಾಠ ಮಾಡಿದ ಶಿಲ್ಪಾ ಶೆಟ್ಟಿ – ಕಹಳೆ ನ್ಯೂಸ್

ಬಾಲಿವುಡ್  ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸದ್ಯ ಇಟಲಿ ಪ್ರವಾಸದಲ್ಲಿದ್ದಾರೆ. ಕನ್ನಡದ ಕೆಡಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಸೀದಾ ಇಟಲಿ ಫ್ಲೈಟ್ ಹತ್ತಿರುವ ಅವರು, ಇಟಲಿಯಲ್ಲಿ ಸ್ವಿಮ್ ಸೂಟ್  ತೊಟ್ಟು ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ತಾವು ಸ್ವಿಮ್ ಸೂಟ್ ತೊಟ್ಟು ನಿಂತಿರುವ ನೆಲದ ಮಹತ್ವವನ್ನು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊನೊಕಿನಿ ತೊಟ್ಟು ಇಟಲಿ (Italy) ನೆಲದ ಮಹತ್ವವನ್ನು ಬರೆದಿರುವ ಶಿಲ್ಪಾ ಶೆಟ್ಟಿ, ‘ಇಟಲಿ ನೆಲವು ದೈವಿಕ ಸ್ಥಳವಾಗಿದೆ. 3000ದಷ್ಟು ಹಳೆಯದಾದ ಪವಿತ್ರ ನೀರು, ಭೂಮಿಯ ಆಳದಿಂದ ಚಿಮ್ಮುವ ಬಿಸಿ ನೀರಿನ ಬುಗ್ಗೆಗಳು. ಚಿಮ್ಮಿ ಬರುವ ನೀರಿನಲ್ಲಿವೆ ಆರೋಗ್ಯದ ಪ್ರಯೋಜನಗಳು. ಈ ನೆಲವನ್ನು ಸ್ಪರ್ಶಿಸುವವರೇ ಧನ್ಯ’ ಎನ್ನುವಂತೆ ಆ ನೆಲದ ವರ್ಣನೆಯನ್ನು ಮಾಡಿದ್ದಾರೆ. ಇದರ ಜೊತೆ ರಜೆಯ ಮೂಡ್ ನಲ್ಲೂ ಅವರು ಇದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಇಟಲಿ ಪ್ರವಾಸದಲ್ಲಿರುವ ಶಿಲ್ಪಾ ಶೆಟ್ಟಿ ಇತ್ತೀಚೆಗಷ್ಟೇ ಅವರು ಕರ್ನಾಟಕಕ್ಕೂ ಬಂದಿದ್ದರು. ತುಳುನಾಡಿನ ಕಟೀಲು ದುರ್ಗಾಪರಮೇಶ್ವರಿ (Kateel Durgaparameshwari Temple) ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು.

ಶಿಲ್ಪಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರು, ಮುಂಬೈನಲ್ಲಿ ಸೆಟಲ್ ಆಗಿದ್ದರು ಕೂಡ ಇಂದಿಗೂ ದೈವ ಕೋಲ, ಇನ್ನಿತರ ಪೂಜೆ ಕಾರ್ಯಕ್ರಮಗಳಿಗೆ ಆಗಾಗ ಕುಟುಂಬ ಸಮೇತ ಮಂಗಳೂರಿಗೆ ಭೇಟಿ ನೀಡುತ್ತಾರೆ. ಅದರಂತೆಯೇ ಇದೀಗ ಶಿಲ್ಪಾ ಶೆಟ್ಟಿ ಕುಟುಂಬ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿತ್ತು. ಶಿಲ್ಪಾ ಜೊತೆ ಪತಿ ರಾಜ್‌ ಕುಂದ್ರಾ, ಶಮಿತಾ ಶೆಟ್ಟಿ, ಸುನಂದಾ ಶೆಟ್ಟಿ ಭಾಗಿಯಾಗಿದ್ದರು.  ದೇವಳದ ವತಿಯಿಂದ ಶಿಲ್ಪಾ ಶೆಟ್ಟಿಗೆ ದೇವರ ವಸ್ತ್ರ ಪ್ರಸಾದ ನೀಡಿ ಅಶೀರ್ವಾದ ಮಾಡಲಾಯಿತು

 

ಕನ್ನಡದ ‘ಕೆಡಿ’ ಸಿನಿಮಾ ಮೂಲಕ 17 ವರ್ಷಗಳ ನಂತರ ಮತ್ತೆ ನಟಿ ಶಿಲ್ಪಾ ಶೆಟ್ಟಿ ಸ್ಯಾಂಡಲ್‌ವುಡ್ ಕಂಬ್ಯಾಕ್ ಆಗಿದ್ದಾರೆ. ಡೈರೆಕ್ಟರ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಪ್ರಮುಖ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ.