ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜೂನ್ 20 ರಂದು ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್
ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜೂನ್ 20 ರಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರೀಯ ವಿಚಾರ ಸಂಕಿರಣ ಸ್ವತ್ವದ ಆಧಾರದ ಮೇಲೆ ಭಾರತದ ಪುನರುತ್ಥಾನ ಉದ್ಘಾಟನಾ ಕಾರ್ಯಕ್ರಮ ಶ್ರೀ ರಾಮ ಪದವಿ ಕಾಲೇಜು ಆವರಣದ ಆಜಾದ್ ಭವನ್ ದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಸುವರ್ಣ ನ್ಯೂಸ್ ಸುದ್ದಿ ವಿಭಾಗದ ಮುಖ್ಯಸ್ಥರು ಅಜಿತ್ ಹನುಮಕ್ಕನವರ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷರು ನಾರಾಯಣ ಸೋಮಯಾಜಿ ವಹಿಸಲಿದ್ದಾರೆ.ಪ್ರಸ್ತಾವನೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಪ್ರಭಾಕರ್ ಭಟ್ ಕಲ್ಲಡ್ಕ ನಡೆಸಿಕೊಡಲಿದ್ದಾರೆ.
ಇನ್ನು 10.45 ರಿಂದ 11.45 ರವರೆಗೆ ಸ್ವತ್ವಯುತ ಭಾರತ ಒಂದು ವಿವೇಚನೆ ಎಂಬ ವಿಷಯದ ಕುರಿತು ಸುವರ್ಣ ನ್ಯೂಸ್ ಸುದ್ದಿ ವಿಭಾಗದ ಮುಖ್ಯಸ್ಥರು ಅಜಿತ್ ಹನುಮಕ್ಕನವರ್ ಅವರು ಗೋಷ್ಠಿ ನಡೆಸಲಿದ್ದಾರೆ.
ಭಾರತೀಯ ಅಭಿವೃದ್ಧಿ ಮಾದರಿಗಳು ಎಂಬ ವಿಷಯದ ಕುರಿತು ಶಿವಮೊಗ್ಗದ ವಿಶ್ರಾಂತ ಪ್ರಾಚಾರ್ಯರು ಪ್ರೊ. ಬಿ.ಎಂ ಕುಮಾರಸ್ವಾಮಿ ಅವರು ಗೋಷ್ಠಿ ನಡೆಸಲಿದ್ದಾರೆ.
ಆಡಳಿತ ಮತ್ತು ನಿರ್ವಹಣೆ ಭಾರತೀಯ ಮಾದರಿ ಎಂಬ ವಿಷಯದ ಕುರಿತು ಮಂಗಳೂರು ನಿವೃತ್ತ ಸೇನಾಧಿಕಾರಿಗಳು ಸಾಮಾಜಿಕ ಕಾರಕರ್ತರು, ಕ್ಯಾ- ಬ್ರಿಜೇಶ್ ಚೌಟ ಅವರು ಗೋಷ್ಠಿ ನಡೆಸಲಿದ್ದಾರೆ.
3.00 ಯಿಂದ 4.00 ವರೆಗೆ ಸ್ವಾಮಿ ವಿವೇಕಾನಂದರ ಚಿಂತನೆಯ ಪ್ರಸ್ತುತತೆ ಎಂಬ ವಿಷಯದ ಕುರಿತು ಚಿಂತಕರು, ಲೇಖಕರು ಹಾಗೂ ಪ್ರಖರ ವಾಗ್ನಿ, ಬೆಂಗಳೂರು ಚಕ್ರವರ್ತಿ ಸೂಲಿಬೆಲೆ ಅವರು ಅವರು ಗೋಷ್ಠಿ ನಡೆಸಲಿದ್ದಾರೆ.
ವಿಶೇಷ ಸೂಚನೆ
ಒಂದು ಸಂಸ್ಥೆಯಿAದ 4 ವಿದ್ಯಾರ್ಥಿಗಳು ಹಾಗೂ ಓರ್ವ ಪ್ರಾಧ್ಯಾಪಕರು ಭಾಗವಹಿಸಬಹುದು.
ಮಂಗಳೂರು ವಿ.ವಿ. ಹೊರತುಪಡಿಸಿ ಇತರ ವಿಶ್ವವಿದ್ಯಾನಿಲಯ ಹಾಗೂ ಅನ್ಯರಾಜ್ಯದ ಪ್ರತಿನಿಧಿಗಳು ಮುಂಚಿತವಾಗಿ ಸೂಚಿಸಿದಲ್ಲಿ ವಸತಿ ವ್ಯವಸ್ಥೆ ಕಲ್ಪಸಲಾಗುವುದು.
ಭಾಗವಹಿಸುವ ಎಲ್ಲರಿಗೂ ಒಒಡಿ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಪ್ರತೀ ಅವಧಿಯ ಕೊನೆಯಲ್ಲಿ ಪ್ರಶೋತ್ತರಕ್ಕೆ ಅವಕಾಶವಿದೆ.
ಭಾಗವಹಿಸುವಿಕೆಯ ಬಗ್ಗೆ – 7760707575 ಹಾಗೂ ಹೆಚ್ಚಿನ ಮಾಹಿತಿಗಾಗಿ 9964280734ನ್ನು ಸಂಪರ್ಕಿಸಿ.