Sunday, November 24, 2024
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ – ಪಾಕಿಸ್ಥಾನದ ಐಎಸ್‌ಐ ಏಜೆಂಟ್‌ಗಳ ಜತೆ ನಂಟು ; ಒಡಿಶಾದಲ್ಲಿ ಮತ್ತೋರ್ವ ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು, ಜೂ 15 : ಕಂಕನಾಡಿ ನಾಗುರಿ ಬಳಿ ಕಳೆದ ನವೆಂಬರ್‌ನಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ್ದ ಕುಕ್ಕರ್‌ ಬಾಂಬ್‌ ಪ್ರಕರಣದ ಆರೋಪಿಯೊಂದಿಗೆ ನಂಟು ಹೊಂದಿದ್ದ ಒಡಿಶಾ ಮೂಲದ ಪ್ರೀತಂಕಾರ್‌ (31) ಎಂಬಾತನನ್ನು ಒಡಿಶಾದ ಸ್ಪೆಷಲ್‌ ಟಾಸ್ಕ್ ಫೋರ್ಸ್‌ ಬಂಧಿಸಿದೆ.

ಒಡಿಶಾದ ಸ್ಟೆಷಲ್ ಟಾಸ್ಕ್ ಫೋರ್ಸ್​ನಿಂದ ಪ್ರೀತಂಕಾರ್ ಬಂಧನದ ಬೆನ್ನಲ್ಲೇ ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಶಾರೀರ್​ಗೆ ಐಸೀಸ್​ (ISIS) ಏಜೆಂಟ್​​ಗಳ ಜೊತೆ ನಂಟು ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರೀತಂಕಾರ್‌ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್‌ ಶಾರೀಕ್‌ಗೆ ಸಿಮ್‌ ಕಾರ್ಡ್‌ ನೀಡಿದ್ದ ಎನ್ನಲಾಗಿದೆ. ಪ್ರೀತಂಕಾರ್‌ಗೆ ಪಾಕಿಸ್ಥಾನದ ಐಎಸ್‌ಐ ಏಜೆಂಟ್‌ಗಳ ಜತೆ ಸಂಪಕವಿತ್ತು. ಈತ ರಾಂಚಿ ಮತ್ತು ಪಟ್ನಾದಲ್ಲಿ ಐಎಸ್‌ಐ ಏಜೆಂಟ್‌ಗಳನ್ನು ಭೇಟಿಯಾಗಿ ಅವರಿಗೂ ಸಿಮ್‌ ಕಾರ್ಡ್‌ ನೀಡಿದ್ದ. ಆತ ಎಂಟನೇ ತರಗತಿ ಕಲಿತಿದ್ದು 2017ರಿಂದ ಬ್ಯಾಂಕ್ ಅಕೌಂಟ್ ಹ್ಯಾಕ್, ನಕಲಿ ಸಿಮ್ ಕಾರ್ಡ್ ಮಾರಾಟ ಹೀಗೆ ಹಲವು ಸೈಬರ್‌ ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗುರಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್​ಐಎಸ್ ಉಗ್ರ ಸಂಘಟನೆ ಕೊನೆಗೂ ಸ್ಫೋಟದ ಹೊಣೆ ಹೊತ್ತು ವಾಯ್ಸ್ ಆಫ್ ಕೂರಸ ನಿಯತಕಾಲಿಕೆಯಲ್ಲಿ ಪ್ರಕಟಿಸಿತ್ತು