Friday, January 24, 2025
ಸುದ್ದಿ

ಕಟಪಾಡಿಯಲ್ಲಿ ಮರ ಹತ್ತುವ ಕಾರ್ಮಿಕರಿಗೆ ಕೆರಾ ಸುರಕ್ಷಾ ವಿಮಾ ಪತ್ರ ವಿತರಣೆ –ಕಹಳೆ ನ್ಯೂಸ್

ಕಾರ್ಯಕ್ರಮವನ್ನ ಕಾಪು ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದ್ರು. ಬಳಿಕ ಅಭಿನಂದನೆ ಸ್ವೀಕರಿಸಿದ ಮಾತನಾಡುತ್ತ, ಅತ್ಯಂತ ಪುರಾತನ ಕಷ್ಟದಾಯಕ ಮತ್ತು ಅಪಾಯಕಾರಿಯಾದ ವೃತ್ತಿಯನ್ನು ಮಾಡುತ್ತಿರುವ ಅಸಂಘಟಿತ ಕಾರ್ಮಿಕರಾದ ಮರ ಹತ್ತುವ ಕಾರ್ಮಿಕರು ಅತ್ಯಂತ ಶ್ರಮ ಜೀವಿಗಳು, ಪ್ರತಿನಿತ್ಯ ಅಪಾಯದ ಬದುಕು ಬದುಕುವವರು, ಅವರಿಗಾಗಿ ನನ್ನಿಂದ ಏನೆಲ್ಲ ಸಹಾಯ ಮಾಡುವಲ್ಲಿ ತಾನು ಸದಾ ಸಿದ್ದ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಟಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮರ ಹತ್ತುವ ಕಾರ್ಮಿಕರಿಗೆ ಕೆರಾ ಸುರಕ್ಷಾ ವಿಮಾ ಪತ್ರ ವಿತರಣೆ ಮತ್ತು ಅಂಚೆ ಕಛೇರಿಯ ಸುರಕ್ಷಾ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮವನ್ನ ಕಾಪು ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದ್ರು. ಬಳಿಕ ಅಭಿನಂದನೆ ಸ್ವೀಕರಿಸಿದ ಮಾತನಾಡುತ್ತ, ಅತ್ಯಂತ ಪುರಾತನ ಕಷ್ಟದಾಯಕ ಮತ್ತು ಅಪಾಯಕಾರಿಯಾದ ವೃತ್ತಿಯನ್ನು ಮಾಡುತ್ತಿರುವ ಅಸಂಘಟಿತ ಕಾರ್ಮಿಕರಾದ ಮರ ಹತ್ತುವ ಕಾರ್ಮಿಕರು ಅತ್ಯಂತ ಶ್ರಮ ಜೀವಿಗಳು, ಪ್ರತಿನಿತ್ಯ ಅಪಾಯದ ಬದುಕು ಬದುಕುವವರು, ಅವರಿಗಾಗಿ ನನ್ನಿಂದ ಏನೆಲ್ಲ ಸಹಾಯ ಮಾಡುವಲ್ಲಿ ತಾನು ಸದಾ ಸಿದ್ದ ಎಂದರು.

ಈ ಭಾಗದಲ್ಲಿ ಸಾವಿರಾರು ಮರ ಹತ್ತುವ ಕಾಯಕ ಮಾಡುವ ಕಾರ್ಮಿಕರು ಇದ್ದು, ಯಾವುದೆ ಸುರಕ್ಷೆ ಇಲ್ಲ, ಮೂರ್ತೆ ಮೂರುವವರು, ತೆಂಗಿನ ಕಾಯಿ, ಅಡಿಕೆ ಕೊಯ್ಯವವರು, ಜೇನು ಹೆಜ್ಜೇನು ಕಚ್ಚಿ, ಮರ ಜಾರಿ, ಕತ್ತಿ ತಾಗಿ, ಬಿದ್ದು ಪ್ರಾಣ ಕಳಕೊಂಡವರು, ಕೈ ಕಾಲು ಬೆನ್ನು ಮುರಿತ, ಹೀಗೆ ನಷ್ಟ ಅನುಭವಿಸುವವರ ಬಳಿ ಹೋದಾಗಲೇ ತಿಳಿಯೂದು, ಅವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಅವರ ಸಂಪೂರ್ಣ ಸುರಕ್ಷೆ ಆಗ ಬೇಕು, ಸರಕಾರದ ಕಾರ್ಮಿಕ ಇಲಾಖೆಯಿಂದ ದೊರೆಯುವ ಸವಲತ್ತು ದೊರಕಿಸಿ ಕೊಡಬೇಕು ಎಂಬ ಬೇಡಿಕೆಯನ್ನು, ಕಾರ್ಯಕ್ರಮದ ಆಯೋಜಕರಾದ ಆಡಿ ನಾನಾ ಸಾಹೇಬ್ ಪ್ರತಿಷ್ಠಾನ, ಮೂರ್ತೆದಾರರ ಸಂಘ, ಮತ್ತು ಕಟಪಾಡಿ ಗ್ರಾಮ ಪಂಚಾಯತ್ ಶಾಸಕರಿಗೆ ಇತ್ತರು, ಕೆರಾ ಸುರಕ್ಷಾ ವಿಮಾ ಪತ್ರ 58 ಕಾರ್ಮಿಕ ಫಲನುಭವಿಗಳಿಗೆ ನೀಡಲಾಯಿತು,

ಅಂಚೆ ಕಚೇರಿಯ ಸುರಕ್ಷಾ ವಿಮಾ ಮಾಹಿತಿ ನೊಂದಣಿಯನ್ನು ನಿಖಿಲ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಇಂದಿರಾ ಆಚಾರ್ಯ ವಹಿಸಿದರು. ಮೂರ್ತೆದಾರರ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ, ಪ್ರಾಣೇಶ್ ಹೆಜಮಾಡಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು. ಸರಕಾರಿ ಇಲಾಖೆ ಅಧಿಕಾರಿ ಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಡಿ ನಾನಾ ಸಾಹೇಬ್ ಧರ್ಮಧಿಕಾರಿ ಪ್ರತಿಷ್ಠಾನದ ಸಂತೋಷ್ ಎಂ ಶೆಟ್ಟಿಗಾರ್ ಕಾರ್ಯಕ್ರಮಕ್ಕೆ ಸಹಕರಿಸಿದರು.