‘ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ’ – ಪೊಲೀಸ್ ಕಮಿಷನರ್ ಮಾಹಿತಿ – ಕಹಳೆ ನ್ಯೂಸ್
ಮಂಗಳೂರು, ಜೂ 15 : ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆಗೆ ಗೃಹ ಸಚಿವ ಪರಮೇಶ್ವರ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸಿಪಿ, ಸಿಸಿಬಿ ನೇತೃತ್ವದಲ್ಲಿ ವಿಂಗ್ ಸ್ಥಾಪನೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲ್ದೀಪ್ ಜೈನ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ವಿಂಗ್ ಅನ್ನು ಸಿಎಸ್ಬಿ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದ್ದು, ಈ ತಂಡದಿಂದ ನಗರದಲ್ಲಿ ಆಗುವ ಕೋಮು ಪ್ರೇರಣೆ ಮೇಲೆ ನಿಗ ಇಡಲಿದ್ದು, ಯಾವುದೇ ರೀತಿಯ ದ್ವೇಷ ಭಾಷಣ ಇತರ ಕೋಮು ಸೂಕ್ಷ್ಮ ವಿಚಾರದ ಬಗ್ಗೆ ಗಮನ ಹರಿಸಲಿದೆ ಎಂದರು.
ಇನ್ನು ಕೋಮು ಸೂಕ್ಷ್ಮ ಕೊಲೆ, ದನ ಕಳವು, ನೈತಿಕ ಪೊಲೀಸ್ ಗಿರಿ ಮೇಲೆ ನಿಗಾ ವಹಿಸಲಾಗಿದ್ದು, ಯಾವುದೇ ವಿಚಾರದ ಬಗ್ಗೆ ಎಸಿಪಿ ಸಿಸಿಬಿ ಕಮಿಷನರ್ ಗೆ ಮಾಹಿತಿ ನೀಡಲಿದ್ದಾರೆ. ಈ ವಿಂಗ್ ನಲ್ಲಿ ಕೋಮು ಸೂಕ್ಷ್ಮ ವಿಚಾರದ ಆರೋಪಿಗಳ ಮೇಲೆ ನಿಗಾ ಇಡಲಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ನಡೆದ ಕೋಮು ಸೂಕ್ಷ್ಮ ಪ್ರಕರಣದ ಮೇಲೆ ಇಲಾಖೆಯಿಂದ ನಿಗಾ ಇಡಲಾಗುತ್ತಾದೆ ಎಂದಿದ್ದಾರೆ.
ಕಳೆದ ಎರಡು ದಿನಗಳಿಂದ ಈ ವಿಂಗ್ ಕಾರ್ಯಾಚರಣೆ ಮಾಡುತ್ತಿದ್ದು, ತಂಡದಲ್ಲಿ ಐದರಿಂದ ಆರು ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಈ ವಿಂಗ್ ಸಿಬ್ಬಂದಿಗಳು ಪ್ರತ್ಯೇಕ ಈ ಪ್ರಕರಣದ ಮೇಲೆಯೇ ನಿಗ ಇಡಲಾಗಿದೆ ಎಂದು ತಿಳಿಸಿದ್ದಾರೆ.