Thursday, January 23, 2025
ಸುದ್ದಿ

ಫ್ರೀ ಬಸ್ : ಪುತ್ತೂರಿನಿಂದ ಬದಿಯಡ್ಕ ತೆರಳುವ ಬಸ್‍ನಲ್ಲಿ ಉಚಿತ ಪ್ರಯಾಣ ಇಲ್ಲ : ಪುತ್ತೂರಿನಿಂದ ಉಪ್ಪಳ ತೆರಳುವ ಬಸ್‍ನಲ್ಲಿ ಉಚಿತ ಪ್ರಯಾಣದ ವ್ಯವಸ್ಧೆ..! : ಇದೆಂಥಾ ರೂಲ್ಸ್ ಮರ್ರೆ.? – ಕಹಳೆ ನ್ಯೂಸ್

ಕಾಂಗ್ರೇಸ್ ಸರ್ಕಾರ ಶಕ್ತಿ ಯೋಜನೆಯನ್ನ ಜಾರಿಗೆ ತಂದು ಮಹಿಳೆಯರ ಮೊಗದಲ್ಲಿ ಸಂತಸ ಮೂಡಿಸುವ ಕೆಲಸ ಮಾಡಿದ್ದು ಹಲವಡೆ ಮಹಿಳೆಯರು ಆರಾಮವಾಗಿ ಸರಕಾರಿ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸ್ತಿದ್ದಾರೆ. ಆದ್ರೆ ಕೆಲವು ಕಡೆಗಳಲ್ಲಿ ಬಸ್ ಕಂಡಕ್ಟರ್‍ಗಳು ಮಹಿಳೆಯರನ್ನ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದು, ಇನ್ನು ಕೆಲವೆಡೆ ಹಲವು ಗೊಂದಲಗಳು ಉಂಟಾಗಿದೆ. ಹೌದು ಶಕ್ತಿ ಯೋಜನೆಯ ಫ್ರೀ ಟಿಕೆಟ್ ಈ ಬಸ್‍ಗೆ ಆಗೋದಿಲ್ಲ ಎಂದು ಮಹಿಳಾ ಪ್ರಯಾಣಿಕರನ್ನ ಸರಕಾರಿ ಬಸ್ ಕಂಡಕ್ಟರ್ ಅರ್ಥ ದಾರಿಯಲ್ಲೇ ಇಳಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ನಿನ್ನೆ ಪುತ್ತೂರಿನಿಂದ ಕೇರಳದ ಬದಿಯಡ್ಕ ಸಂಚಾರ ಮಾಡುವ  KA21 ಈ0073  ನಂಬರ್‍ನ ಬಸ್ ಕಂಡಕ್ಟರ್, ಮಹಿಳೆಯರಲ್ಲಿ ಹಣ ಕೊಟ್ಟು ಟಿಕೆಟ್ ಪಡೆದು ಸಂಚಾರ ಮಾಡುವಂತೆ ತಿಳಿಸಿದ್ದಾರೆ. ಈ ಬಸ್ ಕರ್ನಾಟಕ ನಂಬರ್ ಪ್ಲೇಟೆ ಹೊಂದಿದ್ದು, ಬಿಸಿರೋಡ್ ಘಟಕದ ವಾಹನವಾಗಿದೆ.. ಹೀಗಾಗಿ ಮಹಿಳೆ ನಾವು ವಿಟ್ಲಕ್ಕೆ ಹೋಗುವವರು, ಸರಕಾರಿ ಬಸ್‍ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಲ್ಲವೇ.? ಎಂದು ಪ್ರಶ್ನಿಸಿದಾಗ, ಕಂಡಕ್ಟರ್ ಇದು ಬದಿಯಡ್ಕಕ್ಕೆ ಹೋಗುವ ಬಸ್ ಎಂದಿದ್ದಾರೆ. ಆದ್ರೆ ಕೇರಳ ಗಡಿ ಪ್ರದೇಶದವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎನ್ನುವ ರೂಲ್ಸ್ ಇದೆ ಎಂದು ಮಹಿಳಾ ವಾದಿಸಿದ್ದಾರೆ. ಆದ್ರೆ ಕಂಡಕ್ಟರ್ ಆಗೋದೆ ಇಲ್ಲ, ನೀವು ಹಣ ಕೊಟ್ಟು ಪ್ರಯಾಣ ಮಾಡಿ ಇಲ್ಲವಾದ್ರೆ ಬಸ್‍ನಿಂದ ಕೆಳಗೆ ಇಳಿಯಿರಿ ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಯಾವುದೇ ಬಸ್ಟಾ್ಯಂಡ್ ಇಲ್ಲದ ನಿರ್ಜನ ಪ್ರದೇಶದಲ್ಲಿ ಮಹಿಳೆಯನ್ನ ಇಳಿಸಿ ಮುಂದೆ ಸಾಗಿದ್ದಾರೆ. ಅಲ್ಲದೆ ಮಹಿಳೆ ಇಳಿದು ಹೋಗುತ್ತಿದ್ದಂತೆ ಬಿಟ್ಟಿ ಸಿಕ್ರೆ ಬಂದ್ ಬಿಡ್ತಾರೆ ಎಲ್ಲಾ.. ಎಂದು ನಿಂದಿಸುವ ಕೆಲಸವನ್ನೂ ಕಂಡಕ್ಟರ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಪುತ್ತೂರಿನಿಂದ ಕೇರಳದ ಉಪ್ಪಳಕ್ಕೆ ಸಂಚರಿಸುವ ಸರಕಾರಿ ಬಸ್‍ಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಮಹಿಳಾ ಪ್ರಯಾಣಿಕರು ಗೊಂದಲಕ್ಕೆ ಒಳಗಾಗಿದ್ದಾರೆ. ಪುತ್ತೂರಿನಿಂದ ಕೇರಳದ ಬದಿಯಡ್ಕ ಪ್ರಯಾಣಿಸುವ ಬಸ್‍ನಲ್ಲಿ ಉಚಿತ ವ್ಯವಸ್ಧೆ ಇಲ್ಲ. ಆದ್ರೆ ಪುತ್ತೂರಿನಿಂದ ಕೇರಳದ ಉಪ್ಪಳಕ್ಕೆ ಪ್ರಯಾಣಿಸುವ ಬಸ್‍ಗಳಲ್ಲಿ ಉಚಿತ ವ್ಯವಸ್ಧೆ ಇದೆ. ಇದು ಯಾವ ರೂಲ್ಸ್ ಎಂದು ಮಹಿಳಾ ಪ್ರಯಾಣಿಕರ ಪ್ರಶ್ನೆಯಾಗಿದೆ. ಇನ್ನು ಪುತ್ತೂರಿನಿಂದ, ಕಬಕ, ಕಂಬಳಬೆಟ್ಟು, ವಿಟ್ಲ, ಕೇಪು ಇವು ಕರ್ನಾಟಕ ಗಡಿ ಪ್ರದೇಶದ ಒಳಗೆಯೇ ಬರೋದ್ರಿಂದ, ಈ ಪ್ರದೇಶಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಫ್ರೀ ಟಿಕೆಟ್ ಯಾಕೆ ಇಲ್ಲ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.


ಕಾಂಗ್ರೆಸ್ ಉಚಿತ ಪ್ರಯಾಣದ ಯೋಜನೆಯನ್ನ ಜಾರಿಗೆ ತಂದಿದೆ. ಕರ್ನಾಟಕದ ಒಳಗೆ ಎಲ್ಲಿ ಸಂಚಾರ ಮಾಡಿದ್ರೂ ಮಹಿಳೆಯರಿಗೆ ಉಚಿತ ಎಂದು ಹೇಳಿ ಇದೀಗ ಹೊಸ ಗಿಮಿಕ್ ಶುರು ಮಾಡಿದ್ದು ಮಹಿಳಾ ಪ್ರಯಾಣಿಕರು ಗೊಂದಲಕ್ಕೆ ಒಳಗಾಗಿದ್ದಾರೆ. ಉಚಿತ ಪ್ರಯಾಣದ ಜೊತೆಗೆ ಕೆಲ ಕಂಡಕ್ಟರ್‍ಗಳ ನೀಚ ಬಾಯಿ ಮಾತನ್ನು ಕೇಳಬೇಕಾದ ಪರಿಸ್ಧಿತಿ ಉಂಟಾಗಿದೆ.