Friday, September 20, 2024
ಸುದ್ದಿ

ಲಂಚ ಪಡೆಯುವಾಗ ಎಸಿಬಿ ದಾಳಿ: ಓರ್ವನ ಬಂಧನ – ಕಹಳೆ ನ್ಯೂಸ್

ಮಂಗಳೂರು: ನಗರದ ಪಿರ್ಯಾದಿದಾರರು ಶ್ರೀ ಗಂಗಾಧರ.ಕೆ ಅದ್ಯಪಾಡಿ ಬಜ್ಪೆ, ಇವರ ಪೂರ್ವಿಕರು ಕರ್ನಾಟಕ ಗೃಹ ಮಂಡಳಿಯಲ್ಲಿ ಸಾಲ ಪಡೆದಿದ್ದು, ಸಾಲ ಮರುಪಾವತಿಯಾದ ಬಳಿಕ ನೀಡಿದ ಮೂಲ ದಾಖಲೆಗಳನ್ನು ಹಿಂದಿರಿಗಿಸಲು ಮತ್ತು ನಿರಕ್ಷೇಪಣಾ ಪತ್ರವನ್ನು ಒದಗಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕರ್ನಾಟಕ ಗೃಹ ಮಂಡಳಿ ನಿಗಮದ ವಿಜಯ ಕುಮಾರ್ -ಕಾರ್ಯಪಾಲಕ ಅಭಿಯಂತರರು ಮತ್ತು ಶ್ರೀನಿವಾಸ್ ಶೆಟ್ಟಿ -ಸಹಾಯಕ ಕಂದಾಯ ಅಧಿಕಾರಿ ಇವರಿಬ್ಬರು ಶ್ರೀ ಗಂಗಾಧರ.ಕೆ ಅದ್ಯಾಪಡಿ ಇವರಲ್ಲಿ 20,000 ಲಂಚಕ್ಕೆ ಬೇಡಿಕೆಯನ್ನು ಇಟ್ಟಿರುವ ಘಟನೆ ನಡೆದಿದೆ.

ಈ ನಡುವೆ ಮಾತುಕತೆ ನಡೆಸಿ ಅಧಿಕಾರಿಗಳಿಬ್ಬರು 12,000 ಕ್ಕೆ ಒಪ್ಪಿಕೊಂಡು ಸ್ಥಳದಲ್ಲೇ 2,000 ಹಣ ಪಡೆದಿದ್ದು ಬಾಕಿ ಉಳಿದ 10,000 ಹಣವನ್ನು ನಾಳೆ ನೀಡುವುದಾಗಿ ಹೇಳಿದ್ದು ಪಿರ್ಯಾದಿದಾರರು ನೇರ ಭ್ರಷ್ಟಾಚಾರ ನಿಗ್ರಹ ದಳ ಕಛೇರಿಗೆ ಹೋಗಿ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶುಕ್ರವಾರ ಸಂಜೆ ಪಿರ್ಯಾದಿದಾರು ಮಂಗಳೂರಿನ ಕಾವೂರಿನಲ್ಲಿರುವ ಕರ್ನಾಟಕ ಗೃಹ ಮಂಡಳಿ ನಿಗಮದ ಕಛೇರಿಗೆ ಲಂಚದ ಹಣ ಹಿಡಿದುಕೊಂಡು ಹೋದಾಗ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರರು ವಿಜಯ ಕುಮಾರ್ ಕಛೇರಿಯಲ್ಲಿ ಇರದೆ ಹೊರಗಡೆ ಹೋಗಿದ್ದರು.

ಜಾಹೀರಾತು

ಕಛೇರಿಯಲ್ಲಿ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ ಇದ್ದು ಅವರು ಲಂಚದ ಹಣ ಪಡೆಯುತ್ತಿದ್ದಾಗ ಪಂಚರೊಂದಿಗೆ ದಕ್ಷಿಣ ಕನ್ನಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.

ದಾಳಿಯ ಬಗ್ಗೆ ಮಾಹಿತಿ ಪಡೆದ ವಿಜಯ ಕುಮಾರ್ ಕಾರ್ಯಪಾಲಕ ಅಭಿಯಂತರರು ಪರಾರಿಯಾಗಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಶೃತಿ.ಎನ್.ಎಸ್, ಡಿವೈಸ್ಪಿ ಸುಧೀರ್.ಎಮ್.ಹೆಗ್ಡೆ, ಇನ್ಸ್ಪೆಕ್ಟರ್ ಯೊಗೀಶ್ ಕುಮಾರ್ ಮತ್ತು ಸಿಬ್ಬಂದಿಗಳಾದ ಹರಿಪ್ರಸಾದ್,ಉಮೇಶ್,ರಾಧಕೃಷ್ಣ.ಕೆ, ರಾಧಕೃಷ್ಣ,ಪ್ರಶಾಂತ್,ವೈಶಾಲಿ,ರಾಕೇಶ್ ವಾಗ್ಮನ್,ಗಣೇಶ್ ಕಾರ್ಯಾಚರಣೆಯಲ್ಲಿ ಪಲ್ಗೊಂಡಿದ್ದರು.