Monday, November 25, 2024
ಸುದ್ದಿ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಿಗ್ ಅಪ್‌ಡೇಟ್ : ಆರೋಪಿ ಶಾರೀಕ್‌ಗೆ ಶತ್ರು ದೇಶದ ನೇರ ನಂಟು..! –ಕಹಳೆ ನ್ಯೂಸ್

ಮಂಗಳೂರಿನ ನಾಗುರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಬಿಗ್ ಅಪ್‌ಡೇಟ್ ಲಭಿಸಿದೆ.. ಎನ್‌ಐಎ ಅಧಿಕಾರಿಗಳ ತನಿಖೆಯಲ್ಲಿ ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು ಈ ಪ್ರಕರಣದ ಹಿಂದೆ ಪಾಕಿಸ್ತಾನದ ನಂಟು ಇರುವುದು ಗೊತ್ತಾಗಿದೆ.

ಆಟೋದಲ್ಲಿ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗುತ್ತಿದ್ದ ಆರೋಪಿ ಶಾರೀಕ್‌ಗೆ ಪಾಕಿಸ್ತಾನದ ಗುಪ್ತಚರ ಇಲಾಖೆಯೊಂದಿಗೆ ಸಂಬAಧ ಬೆಳೆಸಿಕೊಂಡಿದ್ದ. ಒಡಿಸ್ಸಾ ಮೂಲದ ವ್ಯಕ್ತಿಯೊಬ್ಬರು ಆರೋಪಿಗೆ ಸಿಮ್ ಕಾರ್ಡ್ ನೀಡಿದ್ದಾರೆ ಎನ್ನುವ ಮಹತ್ವದ ಮಾಹಿತಿ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿದೆ.
ಸಿಮ್ ಕಾರ್ಡ್ ನೀಡಿದ ವ್ಯಕ್ತಿಯ ಜಾಡು ಹಿಡಿದು ಹೋಗಿದ್ದ ಒಡಿಶಾ ಸ್ಪೆಷಲ್ ಟಾಸ್ಕ್ಪೋರ್ಸ್ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಡಿಶಾದ ಬಬ್ಜುರ ಜಿಲ್ಲೆಯ ಬುರುಂಗಾ ಗ್ರಾಮದ ನಿವಾಸಿಯಾದ ಆರೋಪಿ ಪ್ರೀತಂಕಾರ್‌ನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಸಿಮ್‌ಕಾರ್ಡ್ ಹಾಗೂ ಡೆಬಿಟ್‌ಕಾರ್ಡ್ ನೀಡಿದ್ದಾನೆ. ಅಲ್ಲದೇ ಪಾಟ್ನಾ ಹಾಗು ರಾಂಚಿಯಲ್ಲಿ ಕೂಡ ಐಎಸ್‌ಐ ಏಜೆಂಟ್‌ಗಳನ್ನ ಭೇಟಿ ಆಗಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ನಾಗುರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವು 2022 ನವೆಂಬರ್ 11ರಂದು ನಡೆದಿತ್ತು. ಇದು ಸ್ಥಳೀಯ ಜನರು ಸೇರಿದಂತೆ ಇಡೀ ರಾಜ್ಯದಲ್ಲಿ ಭಾರೀ ಆತಂಕವನ್ನು ಉಂಟು ಮಾಡಿತ್ತು. ಇದೀಗ ಮಹತ್ವದ ವಿಚಾರಗಳು ಒಂದೊAದಾಗಿಯೇ ಬೆಳಕಿಗೆ ಬರುತ್ತಿದೆ.