Thursday, January 23, 2025
ಸುದ್ದಿ

ಪತಿಯ ಗುಪ್ತಾಂಗಕ್ಕೆ ಬಿಸಿ ಬಿಸಿ ಎಣ್ಣೆ ಎರಚಿದ ಪತ್ನಿ..! : ಅಸಲಿ ಕಾರಣ ಏನು..? – ಕಹಳೆ ನ್ಯೂಸ್

ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತು ಇದೀಗ ಬದಲಾಗಿದೆ. ಉಂಡು ಮಲಗೋ ಮುನ್ನವೇ ಗಲಾಟೆ ತರಕಕ್ಕೇರಿ ಅನಾಹುತಗಳು ನಡೆದೇ ಬಿಡುತ್ತೆ.. ಗಂಡ-ಹೆಂಡತಿ ಜಗಳದ ಮಧ್ಯೆ ಮಹಿಳೆ ತನ್ನ ಗಂಡನ ಗುಪ್ತಾಂಗಕ್ಕೆ ಬಿಸಿ ಎಣ್ಣೆ ಎರಚಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ವಾಲಿಯರ್‌ನ ಕಂಪು ಪೊಲೀಸ್ ಠಾಣೆ ವ್ಯಾಪ್ತಿಯ ಮಾಧವಿ ನಗರದಲ್ಲಿ ಸುನೀಲ್ ಮತ್ತು ಭಾವನಾ ದಂಪತಿಗಳು ವಾಸವಾಗಿದ್ದರು. ಸುನೀಲ್ ಕುಮಾರ್ ಧಾಕಡ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಕೆಲವು ದಿನಗಳ ಹಿಂದೆ ಪಕ್ಕದ ಮನೆ ಮಹಿಳೆಯೊಬ್ಬರು ಸುನೀಲ್ ಜೊತೆ, ನೀವು ಕೆಲಸಕ್ಕೆ ಹೋದ ನಂತರ ನಿಮ್ಮ ಪತ್ನಿ ತನ್ನ ಪತಿಯೊಂದಿಗೆ ಮಾತನಾಡುತ್ತಾಳೆ ಎಂದು ದೂರು ನೀಡಿದ್ದರು. ಈ ಬಗ್ಗೆ ಸುನೀಲ್ ಪತ್ನಿಯನ್ನು ಕರೆದು ವಿಚಾರಿಸಿದ್ದಾಗಲೂ ಆಕೆ, ನಾನು ಮಾತನಾಡುತ್ತಿಲ್ಲ ಎಂದೇ ಹೇಳಿದ್ದರು.
ಇತ್ತೀಚಿಗೆ ಸುನೀಲ್ ಮನೆಗೆ ಬಂದಾಗ ಭಾವನಾ ಯುವಕನೊಂದಿಗೆ ಮತ್ತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪತ್ನಿಗೆ ಮಾತನಾಡದಂತೆ ಸುನೀಲ್ ಎಚ್ಚರಿಕೆ ಕೊಟ್ಟಿದ್ದರು. ಆಕೆ ಮತ್ತೆ ಮಾತನಾಡಲು ಶುರು ಮಾಡಿದ್ದಾಗ ಬಾರಿ ಜಗಳ ನಡೆದಿದೆ. ಇದರಿಂದ ಬೇಸತ್ತ ಸುನೀಲ್ ಭಾವನಾಳ ಮೊಬೈಲ್ ಕಸಿದುಕೊಂಡಿದ್ದರು.

ಇದಾದ ಬಳಿಕ ರಾತ್ರಿ 2ಗಂಟೆ ಸುಮಾರಿಗೆ ಪತಿ ಗಾಢ ನಿದ್ದೆಗೆ ಜಾರಿದ್ದರು. ಇದನ್ನೇ ಕಾದು ಕುಳಿತಿದ್ದ ಭಾವನಾ ಎದ್ದು ಅಡುಗೆ ಮನೆಯಲ್ಲಿ ಎಣ್ಣೆ ಕಾಯಿಸಿದ್ದಾರೆ. ಬಿಸಿ ಬಿಸಿ ಕಾದ ಎಣ್ಣೆ ತಂದು ಪತಿಯ ಗುಪ್ತಾಂಗದ ಮೇಲೆ ಸುರಿದಿದ್ದಾರೆ. ಬಿಸಿ ಎಣ್ಣೆ ದೇಹದ ಮೇಲೆ ಬಿದ್ದು ಸುನೀಲ್ ದೇಹದ ಶೇ. 70ರಷ್ಟು ಭಾಗ ಸುಟ್ಟುಹೋಗಿದೆ. ಘಟನೆ ನಡೆದ ಬಳಿಕ ಪತ್ನಿ ಮನೆಯಿಂದ ಓಡಿ ಹೋಗಿದ್ದಾಳೆ.

ನೋವಿನಿಂದ ನರಳುತ್ತಿದ್ದ ಸುನೀಲ್ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿಕೊಂಡಿದ್ದಾರೆ. ಧ್ವನಿ ಕೇಳಿದ ಸುತ್ತಮುತ್ತಲಿನವರು ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪತಿ ಹೇಳಿಕೆಯ ಮೇಲೆ ಪತ್ನಿ ವಿರುದ್ದ ಪ್ರಕರಣ ಕೂಡ ದಾಖಲಾಗಿದೆ. ಆರೋಪಿ ಪತ್ನಿಪತ್ತೆಗೆ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.