Friday, January 24, 2025
ಸುದ್ದಿ

ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಬೆಲೆ ಗಣನೀಯ ಏರಿಕೆ –ಕಹಳೆ ನ್ಯೂಸ್

ಮಾಂಸಪ್ರಿಯರಿಗೆ ಬೆಲೆ ಏರಿಕೆ ಶಾಕ್ ತಟ್ಟಿದೆ. ಹೌದು ಕೋಳಿ ಮಾಂಸ ದರ ದುಬಾರಿಯಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಕೆ.ಜಿ.ಯೊಂದಕ್ಕೆ ಇದ್ದ 160 ರೂ. ಕ್ರಮೇಣ ಏರಿಕೆಯಾಗುತ್ತಲೆ ಈಗ 290ರೂ.ಗೆ ಮುಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರುಕಟ್ಟೆಯಲ್ಲಿ ವಿದೌಟ್ ಸ್ಕಿನ್ ಮಾಂಸಕ್ಕೆ 260ರಿಂದ 290 ರೂ. ವರೆಗೆ ಏರಿಕೆ ಕಂಡಿದೆ. ಕೆಲವು ದಿನಗಳ ಹಿಂದೆ 230ರಿಂದ 250 ರೂ. ವರೆಗೆ ಇತ್ತು. ವಿದ್ ಸ್ಕಿನ್ ಮಾಂಸಕ್ಕೆ 220ರಿಂದ 260 ರೂ.ಗೆ ದರ ಏರಿದ್ದು, ಸದ್ಯ ಕುರಿ ಮಾಂಸಕ್ಕೆ (ಮಟನ್) ಕೆ.ಜಿ.ಗೆ 700 ರೂ. ಇದೆ. ಬನ್ನೂರು ಸ್ಪೆಶಲ್ ಮಟನ್ ಕೆ. ಜಿ. 800 ರೂ. ದರದಲ್ಲಿ ಮಾರಾಟವಾಗುತ್ತಿದೆ.

ಕೋಳಿಗೆ ಆಹಾರವಾಗಿ ಬಳಕೆಯಾಗುವ ಧಾನ್ಯ, ಅಕ್ಕಿಹೊಟ್ಟು, ಮೆಕ್ಕೆಜೋಳ, ಸೋಯಾ ಬೆಲೆ ಏರಿಕೆ, ಇಂಧನ ಬೆಲೆ ಹೆಚ್ಚಳದಿಂದ ಸಾಗಣೆ ವೆಚ್ಚ ಅಧಿಕವಾಗಿದೆ. ಬಿಸಿಲಿನಿಂದಾಗಿ ಕೋಳಿಗಳು ಆಹಾರ ತಿನ್ನುವುದು ಕಡಿಮೆ. ನೀರು ಹೆಚ್ಚು ಸೇವಿಸುವುದರಿಂದ ಕೋಳಿಯಲ್ಲಿ ಕೊಬ್ಬು ಪ್ರಮಾಣ ಹೆಚ್ಚಳವಾಗುವುದಿಲ್ಲ. ಬಿಸಿಲಿನ ತಾಪಮಾನಕ್ಕೆ ಕೋಳಿಗಳು ಸಾವನ್ನಪ್ಪುವ ಸಮಸ್ಯೆಯೂ ಇದ್ದು, ಇದರಿಂದ ಮಾಂಸ ಉತ್ಪಾದನೆ ಸಹಜವಾಗಿ ಕುಂಠಿತವಾಗುತ್ತದೆ.
ಅಲ್ಲದೆ ಕರಾವಳಿಯಲ್ಲಿ ಮಳೆಗಾಲ ಆರಂಭವಾಗಿರುವುದರಿoದ ತಾಜಾ ಮೀನಿನ ಪೂರೈಕೆ ಇಲ್ಲ. ಚಿಕನ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಏರಿಕೆಯಾಗಿರಬಹುದು. ಬೆಳ್ಳುಳ್ಳಿ ಶುಂಠಿಯೂ ದುಬಾರಿಯಾಗಿದ್ದು, ಟೊಮೆಟೋ, ಶುಂಠಿ, ಅಲಸಂಡೆ, ಕೊತ್ತಂಬರಿ ಸೊಪ್ಪು ದರವು ದುಪ್ಪಟ್ಟಾಗಿದೆ. ಅಲಸಂಡೆ ಕೆಜಿ 100 ರೂ.ಗೆ ತಲುಪಿದ್ದು, ಶುಂಠಿ ಕೆಜಿ 200 ರೂ. ಕೊತ್ತಂಬರಿ ಸೊಪ್ಪು 140ರಿಂದ 150 ರೂ.ಗೆ ಏರಿಕೆಯಾಗಿದೆ.