Friday, January 24, 2025
ಸುದ್ದಿ

ಶಕ್ತಿ ಯೋಜನೆ ಬೆನ್ನಲ್ಲೇ ಬಂತು 7ಲಕ್ಷ ಕರೆಂಟ್ ಬಿಲ್..! : ಮನೆ ಮಾಲಕ ಫುಲ್ ಶಾಕ್..! – ಕಹಳೆ ನ್ಯೂಸ್

ಶಕ್ತಿ ಯೋಜನೆ ಜಾರಿಯಾದ ಬೆನ್ನಲ್ಲೇ ಕರೆಂಟ್ ಬಿಲ್ ಹೆಚ್ಚಳವಾಗಿದೆ. ಆದ್ರೆ ಸಾವಿರ ಕರೆಂಟ್ ಬಿಲ್ ರ‍್ತಾ ಇದ್ದ ಮನೆ ಮಾಲೀಕರೊಬ್ಬರಿಗೆ ಬರೋಬ್ಬರಿ 7ಲಕ್ಷ ಕರೆಂಟ್ ಬಿಲ್ ಬಂದಿದ್ದು ಇಷ್ಟೊಂದು ದೊಡ್ಡ ಮೊತ್ತದ ಕರೆಂಟ್ ಬಿಲ್ ಕಂಡು ಮನೆ ಮಾಲೀಕ ಶಾಕ್ ಆಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಉಳ್ಳಾಲ ಮೂಲದ ವ್ಯಕ್ತಿಗೆ ಬರೋಬ್ಬರಿ 7ಲಕ್ಷ ವಿದ್ಯುತ್ ಬಿಲ್ ಬಂದಿದೆ. ಉಳ್ಳಾಲಬೈಲಿನ ನಿವಾಸಿ ಸದಾಶಿವ ಆಚಾರ್ಯ ಕರೆಂಟ್ ಬಿಲ್ ಕಂಡು ಅಚ್ಚರಿಗೊಂಡಿದ್ದಾರೆ. ಇಷ್ಟೊಂದು ಬಿಲ್ ಯಾಕೆಂದು ಕೇಳಿದ್ದಕ್ಕೆ ಮೆಸ್ಕಾಂ ಕಚೇರಿಗೆ ಕೇಳಿ ಎಂದ ರೀಡರ್ ಹೇಳಿದ್ದಾನೆ.

ಮನೆ ಮಾಲೀಕ ಸದಾಶಿವ ಆಚಾರ್ಯ ಬಿಲ್ ರೀಡರ್ ಎಡವಟ್ಟಿನಿಂದ ಮನೆಯ ವಿದ್ಯುತ್ ಬಿಲ್ 7,71,072 ರೂಪಾಯಿ ಬಂದಿದೆ ಎಂದು ಹೇಳಿದ್ದಾರೆ. ರೀಡರ್ 99,338 ಯೂನಿಟ್ ಖರ್ಚಾಗಿದೆ ಎಂದು ಬಿಲ್ ನಮೂದಿಸಿದ್ದಾನೆ ಎಂದು ಮನೆ ಮಾಲೀಕ ತಿಳಿಸಿದ್ದಾರೆ.

ಇನ್ನು ಸದಾಶಿವ ಆಚಾರ್ಯ ಅವರಿಗೆ ಪ್ರತಿ ತಿಂಗಳು ಮೂರು ಸಾವಿರದಷ್ಟು ಬಿಲ್ ಬರುತ್ತಿದ್ದು, ಆದರೆ ಒಂದೇ ಬಾರಿ 7ಲಕ್ಷ ರೂಪಾಯಿ ಬಿಲ್ ಬಂದಿದ್ದನ್ನು ಕಂಡು ಶಾಕ್ ಆಗಿದ್ದಾನೆ. ಕೊನೆಗೆ ಮೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ.