ನಿಷೇಧಿತ ಡ್ರಗ್ಸ್ ಮಾರಾಟಕ್ಕೆ ಸ್ಕೆಚ್ : ಬಂಧಿತ ಆರೋಪಿಯಿಂದ 72 ಗ್ರಾಂ ತೂಕದ ಎಂಡಿಎAಎ ಮಾದಕ ವಸ್ತು ವಶ –ಕಹಳೆ ನ್ಯೂಸ್
ಉಳ್ಳಾಲ: ಖಾಸಗಿ ಕಾಲೇಜು ವಸತಿಗೃಹದ ಸಮೀಪ ಡ್ರಗ್ಸ್ ಮಾರಾಟ ನಡೆಸಲು ಮನೆಯ ಬಳಿಯಿರುವ ಶೆಡ್ನಲ್ಲಿ ದಾಸ್ತಾನಿರಿಸಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಗಂಬಿಲ ವೈದ್ಯನಾಥ ನಗರ ನಿವಾಸಿ ಅಕ್ಷತ್ ಕುಮಾರ್ (32) ನನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಒಟ್ಟು ರೂ. 3.60 ಲಕ್ಷ ಮೌಲ್ಯದ 72 ಗ್ರಾಂ ತೂಕದ ಎಂಡಿಎAಎ ಮಾದಕ ವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳಲಾಗಿದೆ.
ಕೋಟೆಕಾರು ಗ್ರಾಮದ ಖಾಸಗಿ ಕಾಲೇಜಿನ ಪುರುಷರ ವಸತಿ ಗೃಹದ ಸಮೀಪದ ತನ್ನ ಮನೆಯ ಶೆಡ್ನಲ್ಲಿ ಪ್ಲ್ರಾಸ್ಟಿಕ್ ಲಕೋಟೆ ಹಾಗೂ ಡಬ್ಬದಲ್ಲಿ ಎಂಡಿಎAಎ ದಾಸ್ತಾನಿರಿಸಿರುವುದರ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ.
ಆರೋಪಿಯು ವಿಚಾರಣೆ ವೇಳೆ ಇತ್ತೀಚೆಗೆ ಸಿಸಿಬಿ ಪೊಲೀಸರ ತಂಡದಿAದ ಕರ್ನಾಟಕ ಗಡಿಭಾಗ ತೌಡುಗೋಳಿ ಕ್ರಾಸ್ ಸಮೀಪ ಬಂಧಿತರಾಗಿದ್ದ ನಾಜಿಮ್ ಯಾನೆ ನಿಜ್ಜು ಮತ್ತು ಮಹಮ್ಮದ್ ರಿಫಾಸ್ನ ಮೂಲಕ ಖರೀದಿ ಮಾಡಿದ್ದ ನಿಷೇಧಿತ ಮಾದಕ ವಸ್ತು ಎಂಡಿಎAಎ ಅನ್ನು ದಾಸ್ತಾನಿರಿಸಿ ಅದನ್ನು ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಆರೋಪಿ ಕೈಯಿಂದ ಮೊಬೈಲ್, ನಗದು ರೂ.20,880, ಡಿಜಿಟಲ್ ತೂಕದ ಮಾಪನ ಸೇರಿದಂತೆ 72 ಗ್ರಾಂ ತೂಕದ ಎಂಡಿಎAಎ ನಿಷೇ ತ ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.