Recent Posts

Monday, January 27, 2025
ಉಡುಪಿ

ಆಗುಂಬೆ ಘಾಟ್‌ನಲ್ಲಿ ಬೈಕ್, ಬಸ್ ಅಪಘಾತ – ಗಂಭೀರ ಗಾಯಗೊಂಡಿದ್ದ ಯುವತಿಯೂ ಮೃತ್ಯು – ಕಹಳೆ ನ್ಯೂಸ್

ಉಡುಪಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಮಣಿಪಾಲದ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿರ್ಮಿತಾ (19) ಇಂದು ಸೋಮವಾರ ಜೀವನ್ಮರಣದ ಹೋರಾಟದಲ್ಲಿ ಬದುಕು ಕೊನೆಯುಸಿರೆಳೆದಿದ್ದಾಳೆ.

ಜೂನ್ 18 ರಂದು ಭಾನುವಾರ ನಡೆದ ಈ ದುರ್ಘಟನೆಯಲ್ಲಿ ಶಶಾಂಕ್ (21) ಸ್ಥಳದಲ್ಲೇ ಮೃತಪಟ್ಟಿದ್ದರು.

ಶಶಾಂಕ್ ಮತ್ತು ನಿರ್ಮಿತಾ ಇಬ್ಬರೂ ಉಡುಪಿಯ ಬಾರ್ಕೂರಿನ ನಾಗರಮಠದವರು.

ಭಾನುವಾರ ಆಗುಂಬೆ ಘಾಟ್‌ನಲ್ಲಿ ಇವರಿಬ್ಬರು ಎದುರಿನಿಂದ ಬರುತ್ತಿದ್ದ ಬಸ್‌ಗೆ ಬೈಕ್ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು.

ಈ ದುರಂತ ಘಟನೆ ನಡೆದಾಗ ಇಬ್ಬರೂ ಸಂಬಂಧಿಕರಾಗಿದ್ದು, ಕುಟುಂಬದ ಆರು ಮಂದಿ ಭಾನುವಾರ ಆಗುಂಬೆ ಸೂರ್ಯಾಸ್ತದ ಸ್ಥಳಕ್ಕೆ ಹೋಗಿದ್ದರು.

ಶಶಾಂಕ್ ಇಂಜಿನಿಯರಿಂಗ್ ಮುಗಿಸಿ ಗುತ್ತಿಗೆದಾರರೊಬ್ಬರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು.