ಮಂಗಳೂರು : ಗಿಫ್ಟ್ ಪಾರ್ಸೆಲ್ ಬಂದಿರುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಗಿಫ್ಟ್ ಪಾರ್ಸೆಲ್ ಬಂದಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಬಂದಿತ್ತು. ಮರುದಿನ ಬ್ರಾಡ್‌ವೇ ಶಿಪ್ಪಿಂಗ್ ಕಂಪೆನಿ ಹೆಸರಿನಲ್ಲಿ 447760437507 ನಂಬರ್‌ನಿAದ ವಾಟ್ಸ್ ಆ್ಯಪ್ ಸಂದೇಶ ಬಂದಿದೆ.
ಆ ಸಂದೇಶದಲ್ಲಿ ಪಾರ್ಸೆಲ್ ಬಂದಿರುವ ಬಗ್ಗೆ ಹೇಳಿ ಮುಂದಿನ ಪಾರ್ಸೆಲ್ ಪ್ರೊಸೆಸ್‌ಗಾಗಿ 45,000 ರೂ. ನೀಡಲು ತಿಳಿಸಲಾಗಿತ್ತು. ಅದರಂತೆ ದೂರುದಾರರು ಹಣ ವರ್ಗಾಯಿಸಿದ್ದಾರೆ. ಆ ಬಳಿಕ 447432476463 ನಂಬರ್‌ನಿAದ ಸಂದೇಶಗಳನ್ನು ಕಳುಹಿಸಿದ ಇನ್ನೋರ್ವ ಅಪರಿಚಿತ ವ್ಯಕ್ತಿ “ಉಡುಗೊರೆ ಜತೆಗೆ ಹಣವನ್ನು ಇಟ್ಟು ನಿಯಮ ಉಲ್ಲಂಘನೆಯಾಗಿದೆ’ ಎಂದು ಬೆದರಿಸಿ 1.61 ಲ.ರೂ.ಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾನೆ.
ಈ ಬಗ್ಗೆ ದೂರುದಾರರು ವಂಚನೆಯಾಗಿರುವ ಕುರಿತು ದೂರು ನೀಡಿದ್ದು, ಸಂದೇಶ ಬಂದಿದ್ದ ಎರಡೂ ಸಂಖ್ಯೆಯೂ 12 ಡಿಜಿಟ್ ಅನ್ನು ಹೊಂದಿದೆ. ಪೊಲೀಸರು ಈ ವಿಚಾರವಾಗಿ ತನಿಖೆ ನಡೆಸುತ್ತಿದ್ದಾರೆ.