Wednesday, January 22, 2025
ಸುದ್ದಿ

ಬಸ್ ನಿರ್ವಾಹಕನ ಮೇಲೆ ಹಲ್ಲೆ : ಮುಸ್ಲಿಂ ಪುಂಡರ ಹೆಡೆಮುರಿಕಟ್ಟಿದ ಪೊಲೀಸರು –ಕಹಳೆ ನ್ಯೂಸ್

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಬಸ್ ತಡೆ ಹಿಡಿದು ಗಲಾಟೆ ನಡೆಸಿ ನಿರ್ವಾಹಕ ಹಾಗೂ ಚಾಲಕನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಬಸ್ ನಿರ್ವಾಹಕ ದೂರು ನೀಡಿದ ಮೇರೆಗೆ ಮೂವರನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಗೆ ಸಂಬoಧಿಸಿ ಚಾರ್ಮಾಡಿ ಗ್ರಾಮದ ಮಹಮ್ಮದ್ ಶಬೀರ್ (21), ಮಹಮ್ಮದ್ ಮಹಾರೂಫ್ (22) ಹಾಗೂ ಮಹಮ್ಮದ್ ಮುಬಶೀರ್ (23) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರಿನಿoದ ಮೂಡಿಗೆರೆಗೆ ತೆರಳುತ್ತಿದ್ದ ಮೂಡಿಗೆರೆ ಡಿಪೋದ ಕೆ.ಎಸ್.ಆರ್.ಟಿ.ಸಿ.ಬಸ್‌ಗೆ ಉಜಿರೆಯಲ್ಲಿ ಬಸ್ ಹತ್ತಿದ ಚಾರ್ಮಾಡಿ ಕಡೆಯ ಹತ್ತಾರು ಮಂದಿ ವಿದ್ಯಾರ್ಥಿಗಳು ಬಾಗಿಲಲ್ಲಿ ನೇತಾಡುತ್ತಿದ್ದರು, ಈ ವೇಳೆ ನಿರ್ವಾಹಕ ಶಿವಕುಮಾರ್ ಅವರನ್ನು ಬಸ್ ಒಳಗೆ ತೆರಳುವಂತೆ ಅಥವಾ ಹಿಂದಿನಿoದ ಬರುವ ಬಸ್‌ನಲ್ಲಿ ಬರಲು ತಿಳಿಸಿದ್ದಾರೆ. ಇದಕ್ಕೆ ನಿರ್ವಾಹಕನಿಗೆ ಬಸ್ ನಿನ್ನ ಅಪ್ಪನದ್ದ ನಾನು ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಇವರುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಈ ಸಂದರ್ಭ ಉಳಿದ 20ಕ್ಕೂ ಅಧಿಕ ವಿದ್ಯಾರ್ಥಿಗಳು ನಿರ್ವಾಹಕನ ಬಳಿಗೆ ಬಂದು ಬೆದರಿಕೆಯೊಡ್ಡಿದ್ದಾರೆ. ಬಳಿಕ ಬಸ್ ಮುಂದೆ ತೆರಳಿ ಸಂಜೆ 6ಗಂಟೆಗೆ ಚಾರ್ಮಾಡಿ ಬಳಿ ಬಸ್ ತಲುಪಿದಾಗ, ಪುಂಡರ ಗುಂಪೊoದು ತಡೆ ಹಿಡಿದು ಅಲ್ಲಿ ಮತ್ತೆ ಗಲಾಟೆ ಎಬ್ಬಿಸಿದ್ದಾರೆ. ಎಂದು ನಿರ್ವಾಹಕ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.