Tuesday, January 21, 2025
ಸುದ್ದಿ

ಸರ್ಕಾರಿ ಬಸ್‌ನಲ್ಲಿ ಕೈ ಕೈ ಮಿಲಾಯಿಸಿಕೊಂಡ ನಾರಿಮಣಿಗಳು : ವಿಡಿಯೋ ವೈರಲ್ –ಕಹಳೆ ನ್ಯೂಸ್

ಸರ್ಕಾರ ಶಕ್ತಿ ಯೋಜನೆ ಜಾರಿಗೆ ಬಂದಿದ್ದೆ ತಡ, ಉಚಿತವಾಗಿಯೇ ಹೆಚ್ಚಿನ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡ್ತ ಇದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯರು ಪುಣ್ಯ ಕ್ಷೇತ್ರಗಳಿಗೆ, ತಮ್ಮ ಸಂಬಂಧಿಕರ ಮನೆಗಳಿಗೆ, ತಮಗಿಷ್ಟ ಬಂದಲ್ಲಿಗೆ ತೆರಳುತ್ತಿದ್ದು, ಇದರಿಂದ ಕೆಲವು ಬಸ್‌ನಲ್ಲಿ ಸೀಟ್‌ಗಾಗಿ ಜಗಳ ನಡೆದಿದ್ದೂ ಇದೆ. ಸದ್ಯ ಅಂತಹದ್ದೆ ಘಟನೆ ಇಲ್ಲೊಂದು ವರದಿಯಾಗಿದ್ದು, ಮಹಿಳೆಯರು ಬಸ್ ನಲ್ಲಿಯೇ ಫುಲ್ ಫೈಟಿಂಗ್ ಮಾಡಿದ್ದಾರೆ.

ಬಸ್ ನಲ್ಲಿ ಮಹಿಳೆಯರೇ ತುಂಬಿತುಳುಕುತ್ತಿದ್ರು, ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಹಿಳೆಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತೀವ್ರವಾಗಿದ್ದರಿಂದ ಕೈ, ಕೈ ಮಿಲಾಯಿಸಿ ಬಿಟ್ಟಿದ್ದಾರೆ. ಫುಲ್ ರಶ್‌ನಲ್ಲಿದ್ದ ಬಸ್‌ನಲ್ಲೇ ಮಹಿಳೆಯರು ಗುದ್ದಾಡಿದ್ದರಿಂದ ಮಕ್ಕಳು ಭಯದಿಂದ ಚೀರಾಡಿದ್ದಾರೆ. ಈ ನಾರಿಯರ ಜಗಳ ಬಿಡಿಸಲು ಸಹ ಪ್ರಯಾಣಿಕರು, ಕೆಲ ಯುವಕರು ಹರಸಾಹಸ ಪಟ್ಟಿದ್ದಾರೆ.

ಇನ್ನು ಕಂಡಕ್ಟರ್ ಅಂತೂ ನನಗೇನು ಸಂಬಂಧವಿಲ್ಲ ಎಂದು ಗಲಾಟೆ ನೋಡುತ್ತಾ ನಿಂತಿದ್ದಾರೆ. ಆದ್ರೆ ಈ ವಿಡಿಯೋ ಮಾತ್ರ ಸಕ್ಕತ್ ವೈರಲ್ ಆಗಿದೆ.