Tuesday, January 21, 2025
ಸುದ್ದಿ

ಅಸಲಿ ಚಿನ್ನ ಎಗರಿಸಿ ನಕಲಿ ಚಿನ್ನ ಇಟ್ಟ ವಂಚಕ ಪೊಲೀಸರ ವಶ –ಕಹಳೆ ನ್ಯೂಸ್

ಗಿರವಿ ಇಟ್ಟಿದ್ದ ಅಸಲಿ ಚಿನ್ನದ ಬದಲು ನಕಲಿ ಚಿನ್ನ ಇಟ್ಟು ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ ಕಳ್ಳತನ ಮಾಡಿದ ಘಟನೆಯೊಂದು ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದ ಎಸ್‌ಬಿಐ ಶಾಖೆಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ಯಾಂಕಿನ ಹೊರಗುತ್ತಿಗೆ ನೌಕರ ಲವ.ಬಿ.ಎನ್ ವಿರುದ್ದ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನ ಕಳ್ಳತನ,ವಂಚನೆ ಆರೋಪ ಕೇಳಿಬಂದಿದೆ.

ಮೇ 5ರಂದು ಬ್ಯಾಂಕಿನ ಗಿರವಿ ವಿಭಾಗದ ಚಿನ್ನ ಪರಿಶೀಲನೆ ವೇಳೆ ಸಿಬ್ಬಂದಿಯ ವಂಚನೆ ಬಯಲಾಗಿದ್ದು, ಎಸ್‌ಬಿಐ ಪ್ರಧಾನ ವ್ಯವಸ್ಥಾಪಕಿ ಅನುರಾಧ ಅವರು ಲವ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಲವ ಬ್ಯಾಂಕಿನಲ್ಲಿ ಚಿನ್ನ ಗಿರವಿ ಇಟ್ಟಿದ್ದ ಗ್ರಾಹಕರ ಚಿನ್ನ ಎಗರಿಸಿರುವ ವಂಚಕನಾಗಿದ್ದು, ಈತ ಬ್ಯಾಂಕ್ ಅಧಿಕಾರಿಗಳ ಜೊತೆ ವಿಶ್ವಾಸಗಳಿಸಿ ಚಿನ್ನದ ಸಾಲದ ದಸ್ತಾವೇಜು ಉಸ್ತುವಾರಿ ಹೊತ್ತಿದ್ದ. ಆದರೆ ಕಪಾಟಿನಲ್ಲಿದ್ದ 30 ಪ್ಯಾಕೆಟ್ ಚಿನ್ನದಲ್ಲಿ 18 ಪ್ಯಾಕೆಟ್ ಚಿನ್ನವನ್ನು ಎಗರಿಸಿ ಅದರಲ್ಲಿ ನಕಲಿ ಚಿನ್ನ ಇಟ್ಟಿದ್ದಾನೆ. ಸದ್ಯ ಈ ವಿಚಾರವಾಗಿ ಕೊಣನೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಲವ ವಿರುದ್ದ ಎಫ್‌ಐಆರ್ ದಾಖಲಾಗಿದ್ದು, ಕೊನೆಗೂ ಪೊಲೀಸರು ಆತನನ್ನು ಬಂಧಿಸಿದ್ದಾರೆ.