ರಾಮನಗರದತ್ತ ಸುಳಿಯದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ : ಜನರಿಂದ ಪ್ರಶ್ನೆಗಳ ಸುರಿಮಳೆ –ಕಹಳೆ ನ್ಯೂಸ್
ರಾಮನಗರ ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡು 10 ದಿನಗಳು ಕಳೆದರೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತ್ರ ತಮ್ಮ ಜಿಲ್ಲೆಯತ್ತ ಸುಳಿದಿಲ್ಲ.
ಈ ಬಗ್ಗೆ ರಾಮನಗರದ ಜನರು ಬೇಸರ ವ್ಯಕ್ತಪಡಿಸಿದ್ದು, ಕೇವಲ ನಾಮಕಾವಸ್ತೆಗೆ ಮಾತ್ರ ರಾಮಲಿಂಗಾರೆಡ್ಡಿಯವರು ಜಿಲ್ಲಾ ಉಸ್ತುವಾರಿ ಸ್ಥಾನ ವಹಿಸಿಕೊಂಡರೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇನ್ನೂ ಆಅಒ ಡಿ.ಕೆ ಶಿವಕುಮಾರ್ ಅವರ ತವರು ಜಿಲ್ಲೆಯಾದ ರಾಮನಗರಕ್ಕೆ ರಾಮಲಿಂಗಾರೆಡ್ಡಿ ಬರುವುದನ್ನು ಜನರು ಕಾಯುತ್ತಿದ್ದಾರೆ. ಸರ್ಕಾರ ರಚನೆಯಾಗಿ ಶಾಸಕರಿಗೆ ಮಂತ್ರಿಗಿರಿ ಕೊಟ್ಟು, ಜಿಲ್ಲಾ ಉಸ್ತುವಾರಿ ಸ್ಥಾನ ಕೊಟ್ಟಿದ್ದರು ಇಲ್ಲಿವರೆಗೆ ಡಿ.ಕೆ ಶಿವಕುಮಾರ್ ಆಗಲಿ, ರಾಮಲಿಂಗಾರೆಡ್ಡಿ ಅವರಾಗಲಿ ಜಿಲ್ಲೆಯ ಕಡೆ ತಲೆ ಹಾಕಿಲ್ಲ. ಹೀಗಾಗಿ ಒಮ್ಮೆಯಾದರೂ ಜಿಲ್ಲೆಗೆ ಭೇಟಿ ನೀಡಿ ಜನರ ಸಂಕಷ್ಟ ಅರಿತುಕೊಳ್ಳಿ ಎಂದು ಜನರು ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರಂತೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಜಿಲ್ಲೆಯ ಅಭಿವೃದ್ಧಿ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಜನರಿದ್ರು, ಆದರೆ ಪ್ರಮುಖ ಸಚಿವರೇ ಜಿಲ್ಲೆಯ ಕಡೆ ಸುಳಿಯದಿರುವುದು ಆಶ್ಚರ್ಯವಾಗಿದೆ. ಇವರುಗಳು ಕೇವಲ ಮತಕ್ಕಾಗಿ ಜನರ ನಂಬಿಕೆ ಗಳಿಸಿಕೊಳ್ಳಲು ಯತ್ನಿಸಿದ್ದಾರಾ? ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.