Monday, January 20, 2025
ಸುದ್ದಿ

ಪಿಡಿಒಗೆ ‘ಅಯ್ಯೋ ನನ್ಮಗನೇ..’ ಎಂದ ಕಾಂಗ್ರೆಸ್ ಶಾಸಕ : ‘ಅಧಿಕಾರದ ಮದ’ ಎಂದ ಸಾರ್ವಜನಿಕರು –ಕಹಳೆ ನ್ಯೂಸ್

ಕಾಂಗ್ರೆಸ್‌ನ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅಸಂವಿಧಾನಿಕ ಪದ ಬಳಕೆ ಮಾಡಿರುವ ದೃಶ್ಯ ಎಲ್ಲೆಡೆ ಭಾರೀ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕ ಎನ್ನುವ ಪರಿಜ್ಞಾನವಿಲ್ಲದೇ ಶಾಸಕ ಶ್ರೀನಿವಾಸ್ ಪಿಡಿಒಗಳ ಸಭೆಯಲ್ಲಿ ‘ಅಯ್ಯೋ ನನ್ಮಗನೇ ಓದೋರಿಗೆ ಕೊಡಲೇ’ ಎಂದು ಪಿಡಿಒಗೆ ಏಕವಚನದಲ್ಲೇ ತಾಕೀತು ಮಾಡಿದ್ದಾರೆ.

ಇನ್ನು ತಾಲೂಕು ಪಂಚಾಯತ್ ಇಒ ಸೇರಿಂದತೆ 25 ಕ್ಕೂ ಹೆಚ್ಚು ಪಿಡಿಒಗಳು ಈ ಸಭೆಯಲ್ಲಿ ಸೇರಿದ್ದು, ಸಭೆಯುದ್ದಕ್ಕೂ ಶಾಸಕರು ಏಕವಚನದಲ್ಲೇ ಸಂಭೋದಿಸಿದ್ದಾರೆ. ಅಧಿಕಾರಿಗಳಿಗೆ ಅವ್ಯಾಚ ಪದಗಳನ್ನು ಬಳಸಿರುವ ಕಾಂಗ್ರೆಸ್ ಶಾಸಕನ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದ್ದು, ಅಧಿಕಾರದ ಮದ ತಲೆಗೆ ಹತ್ತಿದಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.