Monday, January 20, 2025
ಸುದ್ದಿ

ಪುಣಚದಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ – ಕಹಳೆ ನ್ಯೂಸ್

ವಿಟ್ಲ : ಪುಣಚ ಗ್ರಾಮ ಪಂಚಾಯತ್ ನ ವ್ಯಾಪ್ತಿಯಲ್ಲಿ ಬರುವ ಕೋಡಂಚಡ್ಕ ಬೈರಿಕಟ್ಟೆ ಎಂಬಲ್ಲಿ ಅನ್ಯಮತೀಯ ವ್ಯಕ್ತಿ ಅಬ್ದುಲ್ಲ ಮಾದುಮೂಲೆ ಎಂಬಾತ ಅಕ್ರಮವಾಗಿ ಕಟ್ಟಡ ಕಟ್ಟಿ ಅದರಲ್ಲಿ ಗೋ ಫಾರ್ಮ್ (ಭವಿಷ್ಯದ ಕಸಾಯಿಖಾನೆ) ಮಾಡಲು ಪ್ರಯತ್ನಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನ ವಿರೋಧಿಸಿ ಪುಣಚ ಪಂಚಾಯತ್ ನ ಮುಂಭಾಗದಲ್ಲಿ ಹಿಂದೂ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಈ ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸಲು ಪರವಾನಿಗೆ ನೀಡಲು ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರ ಹುನ್ನಾರವಿದೆ. ಈ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಅವಕಾಶವಿದ್ದರೂ ಕೂಡ ಯಾವುದೇ ಕ್ರಮವನ್ನು ಪಂಚಾಯತ್ ಕೈಗೊಳ್ಳಲಿಲ್ಲ, ಈ ಹಿನ್ನಲೆ ಅಕ್ರಮ ಕಸಾಯಿಖಾನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಜೊತೆಗೆ ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಹಾಗು ಪ್ರಮುಖರು ಭಾಗಿಯಾಗಿದ್ದರು.