Recent Posts

Monday, January 20, 2025
ಸುದ್ದಿ

ಭಾರತಕ್ಕೆ ಆತ್ಮ ಇದ್ದು, ಅದು ಜಾಗೃತವಾಗಿದೆ ಹಾಗಾಗಿ ಭಾರತದ ನಾಶ ಸಾಧ್ಯವಿಲ್ಲ ; ಅಜಿತ್ ಹನುಮಕ್ಕರ್ –ಕಹಳೆ ನ್ಯೂಸ್

ಬಂಟ್ವಾಳ: ಭಾರತಕ್ಕೆ ಆತ್ಮ ಇದೆ, ಅದು ಜಾಗೃತವಾಗಿದೆ, ಹಾಗಾಗಿ ಭಾರತವನ್ನು ನಾಶಮಾಡಬೇಕು ಎಂದು ಕನಸು ಕಾಣುವವರಿಗೆ ಅದು ಸಾಧ್ಯವಿಲ್ಲ. ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು,ಸದ್ಯದ ಪರಿಸ್ಥಿತಿಯಲ್ಲಿ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.ಭಾರತದ ಒಳಗಿನ, ನಮ್ಮೊಳಗಿನ ಗಲಾಟೆ ಮತ್ತು ಅಮಾನವೀಯ ಆಸೆಗಳು ಭಾರತದ ಪರಮವೈಭವನ್ನು ಹಾಳು ಮಾಡಬಹುದೇ ಹೊರತು ಇತರರಿಗೆ ಸಾಧ್ಯವಿಲ್ಲ ಎಂದು ಅಜಿತ್ ಹನುಮಕ್ಕನವರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಂದು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಜಾದ್ ಭವನದಲ್ಲಿ ನಡೆದ “ಸ್ವತ್ವದ ಆಧಾರದ ಮೇಲೆ ಭಾರತದ ಪುನರುತ್ಥಾನ ” ಎಂಬ ವಿಷಯದಲ್ಲಿ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಬಳಿಕ ಭಾರತ ಎಂಬ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಭಾರತ ಇಟ್ಟಿರುವ ಹೆಜ್ಜೆಗಳು ಸಣ್ಣದಲ್ಲದ , ಸಡಿಲವಾದುದಲ್ಲ, ಸಾಮಾನ್ಯವಾದುದಲ್ಲ, ದೃಡವಾದ ಹೆಜ್ಜೆಗಳಾಗಿದೆ. ಜಗತ್ತಿನಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಅಮದು ಮಾಡುವ ಪಟ್ಟಿಯಲ್ಲಿ ಎತ್ತರದ ಸ್ಥಾನದಲ್ಲಿದೆ. ಭಾತರದ ಪ್ರಸ್ತುತ ಉತ್ಪಾದಕ ದೇಶವಾಗಿ ಜಗತ್ತಿನಲ್ಲಿ ಗುರುತಿಸಲ್ಪಟ್ಟಿದೆ. ಭಾರತ ಆರ್ಥಿಕವಾಗಿ , ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣನಾಗಿರುವ ಅಮೇರಿಕಾವನ್ನು ಮೀರಿಸಿ ಮುನ್ನಡೆಯುತ್ತಿದೆ , ಭಾರತ ಅಮೃತಕಾಲದ ಹತ್ತಿರದಲ್ಲಿದೆ ಎಂಬುದು ಪ್ರಸ್ತುತ ದಿನಗಳಲ್ಲಿ ಕಾಣಬಹುದು. ಯುವಪೀಳಿಗೆ ಅಮೃತಕಾಲದ ಪೀಳಿಗೆ,ಪರಮವೈಭವದ ಕಾಲದಲ್ಲಿ ನಾವಿದ್ದೇವೆ. ಭಾರತದ ಶ್ರೇಷ್ಠತೆ ಕೆಲವು ಸಂದರ್ಭ ಮೇಲೆ ಕೆಳಗೆ ಆಗಿದ್ದು ನಿಜ,ಆದರೆ ನಿರ್ನಾಮ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.

ಭಾರತ ಸ್ವಾಭಿಮಾನ, ಸ್ವಾವಲಂಬನೆ, ಸ್ವತ್ವ,ನಮ್ಮತನ,ಜಗತ್ತಿಗೆ ದಾರಿತೋರಿಸುವ ದೇಶ ಮತ್ತೊಮ್ಮೆ ನಮ್ಮ ಹತ್ತಿರ ಬರುತ್ತಿದೆ, ಈ ಮೂಲಕ, ಸ್ವಾವಲಂಬಿ ಭಾರತ ನಿರ್ಮಾಣವಾಗುತ್ತಿದೆ, ಹೊರಗಿನವರು ಏನು ಮಾಡಲಿಕ್ಕೆ ಆಗಲ್ಲ, ಯಾರಿಂದಲೂ ಏನು ಮಾಡಲಿಕ್ಕೆ ಸಾಧ್ಯವಿಲ್ಲ, ನಾವೇ ಎಡವಟ್ಟು ಮಾಡಿಕೊಳ್ಳಬೇಕಷ್ಟೆ ಎಂದು ಅವರು ಸೂಕ್ಷ್ಮವಾಗಿ ತಿಳಿಸಿದರು.

ಭಾರತ ದೇಶದಲ್ಲಿ ಭಯೋತ್ಪಾದಕರು ಯಾರು ಬಂದು ಬಾಂಬ್ ಇಟ್ಟು ಹೋಗುವುದು ಅಷ್ಟು ಸುಲಭ ಎಂಬ ಕಾಲವಿತ್ತು, ಅ ಸಂದರ್ಭದಲ್ಲಿ ಆಗಿರುವ ಸಾವು ನೋವುಗಳ ಸಂಖ್ಯೆಯನ್ನು ಹೇಳಲು ಬಹಳ ಬೇಸರ ಆಗುತ್ತದೆ, ಆದರೆ ಈಗ ಬಾಂಬ್ ಬ್ಲಾಸ್ಟ್ ಗಳು ಯಾಕೆ ಕಡಿಮೆಯಾಯಿತು ಎಂಬುದನ್ನು ಗಮನಿಸಬೇಕಾಗಿದೆ ಎಂದು ಅವರು ದೇಶದ ಭದ್ರತೆಯ ವಿಚಾರದಲ್ಲಿ ಬಲಿಷ್ಠವಾದ ಮತ್ತು ಎಲ್ಲಾ ವಿಚಾರದಲ್ಲಿ ಸ್ವಾವಲಂಬನೆ ಮತ್ತು ಸದೃಡವಾಗಿದೆ ಎಂಬುದನ್ನು ಮನದಟ್ಟು ಮಾಡಿದರು.

ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದಾರೆ ಆದರೆ ಬ್ರಿಟಿಷ್ ತನ ಬಿಟ್ಟು ಹೋಗಿಲ್ಲ,ಇಂದಿಗೂ ಉಳಿದುಕೊಂಡಿದೆ,ಸ್ವತ್ವದ ಅರಿವು ಮೈಗೂಡಿದಾಗ ಬದಲಾವಣೆ ಸಾಧ್ಯ ಎಂದು ಅವರು ತಿಳಿಸಿದರು.

ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರು ಸಮಾಜದ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಮತ್ತು ಧರ್ಮ,ಸಂಸ್ಕ್ರತಿಯನ್ನು ಉಳಿಸುವ ಸಲುವಾಗಿ ಮಾಡಿದ ಸಮಾಜಮುಖಿ ಹೋರಾಟಗಳು ಆದರ್ಶವಾದರೆ, ಶಿಕ್ಷಣ ಸಂಸ್ಥೆಯ ಮೂಲಕ ಸಮಾಜದ ಪರಿವರ್ತನೆಗೆ ನೀಡಿದ ಕೊಡುಗೆ ಅತ್ಯಂತ ದೊಡ್ಡದಾಗಿದೆ ಎಂದು ಹೊಗಳಿದರು.

ಇಲ್ಲಿನ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಸ್ವತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು ದೇಶಕ್ಕೆ ಕೊಡುಗೆ ನೀಡುತ್ತಾರೆ ಎಂಬುದಕ್ಕೆ ಶಾಲಾ ದಿನಚರಿಗಳು ಸಾಕ್ಷಿಯಾಗಿವೆ.ಅಂತಹ ಅದ್ಬುತವಾದ ಶಿಕ್ಷಣವನ್ನು ನೀಡುವ ಸಂಸ್ಥೆ ಮಾದರಿಯಾಗಿದೆ ಎಂದು ಅವರು ತಿಳಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇವರು ವಿಚಾರ ಸಂಕಿರಣದ ಅಗತ್ಯತೆ- ಅನಿವಾರ್ಯತೆ ಬಗ್ಗೆ ಪ್ರಸ್ತಾವನೆಗೈದರು.
ಭಾರತ ಧರ್ಮ ಆಧಾರದ ಮೇಲೆ ಬೆಳೆಯುತ್ತಿದ್ದು, “ಸ್ವ” ದ ಚಿಂತನೆ,ಯೋಚನೆ ಬಂದಾಗ ಬದಲಾವಣೆಗೆ ಕಾರಣವಾಗಬಹುದು ಎಂಬ ನಿಟ್ಟಿನಲ್ಲಿ ವಿಚಾರವನ್ನಿಟ್ಟುಕೊಂಡು ಸಂಕಿರಣ ಅಯೋಜಿಸಿದ್ದೇವೆ ಎಂದು ತಿಳಿಸಿದರು
ಸ್ವತ್ವದ ಆಧಾರದ ಮೇಲೆ ಜೀವನ ನಡೆಸಿದಾಗ ಜಗತ್ತು ಬದಲಾಗುತ್ತದೆ ಎಂಬ ಚಿಂತನೆಯನ್ನಿಟ್ಟುಕೊAಡು ವಿಚಾರಸಂಕಿರಣವನ್ನು ಅಯೋಜಿಸಿದ್ದೇವೆ, ವಿಚಾರಸಂಕಿರಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದಾಗ ,ವಿಚಾರಗಳನ್ನು ಮೈಗೂಡಿಸಿಕೊಂಡಾಗ ಮಹತ್ತರವಾದ ಬದಲಾವಣೆಯನ್ನು ಕಾಣಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಶಿವಮೊಗ್ಗದ ವಿಶ್ರಾಂತ ಪ್ರಾಚಾರ್ಯರ ಪ್ರೊ.ಬಿ.ಎಂ.ಕುಮಾರಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಯತಿರಾಜ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

ಆರಂಭದಲ್ಲಿ ಅತಿಥಿಗಳಿಗೆ ಶ್ರೀರಾಮ ವಿದ್ಯಾಕೇಂದ್ರದ ಪ್ರತಿ ವಿಭಾಗದ ಪರಿಚಯವನ್ನು ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರು ಮಾಡಿದರು.
ಬಳಿಕ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ನಡೆಯುವ ಕೇಂದ್ರದ ಅಜಾದ್ ಭವನಕ್ಕೆ ಭಾರತೀಯ ಸಂಸ್ಕೃತಿಯ ಶೈಲಿಯಲ್ಲಿ ಸ್ವಾಗತಿಸಿದರು.
ನಂತರ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಸಿ , ದೀಪ ಬೆಳಗಿಸಿದರು. ಶಾಲಾ ದಿನಚರಿಯ ಪ್ರಕಾರ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ಸಲ್ಲಿಸಿದರು