Recent Posts

Friday, November 22, 2024
ಅಂತಾರಾಷ್ಟ್ರೀಯರಾಷ್ಟ್ರೀಯವಾಣಿಜ್ಯಸುದ್ದಿ

33ನೇ ವಯಸ್ಸಲ್ಲೇ 10 ಖಾಸಗಿ ಜೆಟ್‌ ಹೊಂದಿರುವ ಯುವ ಉದ್ಯಮಿ ‘ ದ ಸ್ಕೈ ಕ್ವೀನ್ ‘ ಕನಿಕಾ ಟೇಕ್ರಿವಾಲ್‌ ಯಶೋಗಾಥೆ ನಿಜಕ್ಕೂ ಸ್ಫೂರ್ತಿದಾಯಕ.!! – ಕಹಳೆ ನ್ಯೂಸ್

ವದೆಹಲಿ: ಭಾರತ ಸರ್ಕಾರದಿಂದ ರಾಷ್ಟ್ರೀಯ ವಾಣಿಜ್ಯೋದ್ಯಮ ಪ್ರಶಸ್ತಿ ಮತ್ತು ವರ್ಲ್ಡ್‌ ಎಕನಾಮಿಕ್‌ ಫೋರಮ್‌ ನಿಂದ ಯುವ ಜಾಗತಿಕ ನಾಯಕಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವ JetSetGo ಸಿಇಒ ಕನಿಕಾ ಟೇಕ್ರಿವಾಲ್‌ ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕನಿಕಾ ಟೇಕ್ರಿವಾಲ್‌(33 ವರ್ಷ) ಅವರ ಆಸ್ತಿಯ ಒಟ್ಟು ಮೌಲ್ಯ 400 ಕೋಟಿ ರೂಪಾಯಿಗೂ ಅಧಿಕ. ತನ್ನ 22ನೇ ವಯಸ್ಸಿನಲ್ಲೇ ಕನಿಕಾ ಜೆಟ್‌ ಸೆಟ್‌ ಗೋ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

JetsetGo ಪ್ಲೇನ್‌ ಅಗ್ರಗೇಟರ್‌ ಸ್ಟಾರ್ಟ್‌ ಅಪ್‌ ಸಂಸ್ಥೆಯಾಗಿದೆ. ಜೆಟ್‌ ಸೆಟ್‌ ಗೋ ಕಂಪನಿ ಗ್ರಾಹಕರಿಗೆ, ಸಂಸ್ಥೆಗಳಿಗೆ, ಉದ್ಯಮಿಗಳಿಗೆ ವಿಮಾನ, ಹೆಲಿಕಾಪ್ಟರ್‌ ಸೇವೆಯನ್ನು ಒದಗಿಸುತ್ತದೆ.

ಕನಿಕಾ ಟೇಕ್ರಿವಾಲ್‌ ಮಾರಣಾಂತಿಕ ಕ್ಯಾನ್ಸರ್‌ ರೋಗದ ವಿರುದ್ಧ ಹೋರಾಡಿ ಬದುಕುಳಿದ ಗಟ್ಟಿಗಿತ್ತಿ. ಕನಿಕಾ ಯಶೋಗಾಥೆ ನಿಜಕ್ಕೂ ಸ್ಫೂರ್ತಿದಾಯಕವಾಗಿದ್ದು, ಕಿರಿಯ ವಯಸ್ಸಿನಲ್ಲೇ ಸ್ವಂತ ವಾಯುಯಾನ ಆಧಾರಿತ ಸ್ಟಾರ್ಟ್‌ ಅಪ್‌ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಈಗ ಕನಿಕಾ ಬಳಿ 10 ಖಾಸಗಿ ಜೆಟ್‌ ವಿಮಾನಗಳಿವೆ.

ಕನಿಕಾ ಅವರ JetSetGo ಭಾರತದ ಮೊದಲ ವಿಮಾನಯಾನ ಗುತ್ತಿಗೆಯಾಧಾರಿತ ಸಂಸ್ಥೆಯಾಗಿದ್ದು, ಅಂದಾಜು 1,00,000 ಪ್ರಯಾಣಿಕರನ್ನು ನಿರ್ವಹಿಸುತ್ತಿದೆ.

ಟೇಕ್ರಿವಾಲ್‌ ಭೋಪಾಲ್‌ ನಲ್ಲಿ ಜನಿಸಿದ್ದು, ಲಾರೆನ್ಸ್‌ ಸ್ಕೂಲ್‌ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ನಂತರ ಭೋಪಾಲ್‌ ನ ಜವಾಹರಲಾಲ್‌ ನೆಹರೂ ಸೀನಿಯರ್‌ ಸೆಕೆಂಡರಿ ಸ್ಕೂಲ್‌ ನಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ಕೋವೆಂಟ್ರಿ ಯೂನಿರ್ವಸಿಟಿಯಲ್ಲಿ ಪದವಿ ಶಿಕ್ಷಣ ಪಡೆದಿದ್ದರು.

“ನನ್ನಲ್ಲಿ ವಿಮಾನಯಾನ ಸ್ಟಾರ್ಟ್‌ ಅಪ್‌ ಆರಂಭಿಸುವ ಬಗ್ಗೆ ಮೂರು ವರ್ಷಗಳ ಕಾಲ ಆಲೋಚಿಸಿದ್ದೆ. ಇನ್ನೇನು ನನ್ನ ಕನಸನ್ನು ನನಸು ಮಾಡಿಕೊಳ್ಳಬೇಕೆಂದು ಹೊರಟಾಗ ಮಾರಣಾಂತಿಕ ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಎದುರಾಗಿತ್ತು. ಇದರಿಂದಾಗಿ ಕೆಲವು ವರ್ಷಗಳು ಉರುಳಿದ್ದವು. ಆದರೆ ಅದೃಷ್ಟವಶಾತ್‌ ನನ್ನ ಕನಸು ಸಾಕಾರಗೊಂಡಿತ್ತು” ಎಂದು ಕನಿಕಾ ಇಂಡಿಯಾಟೈಮ್ಸ್‌ ಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು

ಕನಿಕಾ ಟೇಕ್ರಿವಾಲ್‌ ಹೈದರಾಬಾದ್‌ ಮೂಲದ ಉದ್ಯಮಿಯನ್ನು ವಿವಾಹವಾಗಿದ್ದು, ಭಾರತದ ಅತೀ ಕಿರಿಯ ಸ್ವ ಉದ್ಯಮಿ ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಈಕೆಗೆ “ದ ಸ್ಕೈ ಕ್ವೀನ್”‌ ಎಂಬ ಬಿರುದು ನೀಡಲಾಗಿದೆ.