9 ನೇ ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ದೇಶದ್ಯಾಂತ ವಿವಿಧ ರೀತಿಯಲ್ಲಿ ಯೋಗಾಸನ ಪ್ರರ್ದಶಗೊಂಡಿದೆ.
ಉತ್ತಮ ಆರೋಗ್ಯಕ್ಕಾಗಿ, ದೇಹವನ್ನು ಸ್ಲಿಮ್ ಆಗಿರಿಸಲು, ಜೊತೆಗೆ ಶಾರೀರಿಕ ಮಾನಸಿಕ ನೆಮ್ಮದಿಗಾಗಿ ಯೋಗದತ್ತ ಜನರು ಮೊರೆ ಹೋಗ್ತಾರೆ. ಆದರೆ ಇಲ್ಲೊಬ್ಬರು ವಿಭಿನ್ನ ರೀತಿಯಲ್ಲಿ ಯೋಗ ಮಾಡಿ, ಜನರು ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಹೌದು, ಬೆಳಗಾವಿಯಲ್ಲಿ ತಂದೆ, ಮಗಳು ವಿನೂತನ ರೀತಿಯಲ್ಲಿ ನೀರಿನ ಮೇಲೆ ಯೋಗ ಮಾಡಿದ್ದಾರೆ.
ಎಲ್ಲರೂ ಭೂಮಿ ಮೇಲೆ ಯೋಗಸಾನ ಮಾಡಿದ್ರೆ, ಬೆಳಗಾವಿ ನಿವಾಸಿಗಳಾದ ಅರ್ಜುನ್ ಮಿರಜಕರ್ ಹಾಗೂ ಇವರ ಮಗಳು ಶ್ರೀದೇವಿ ಅರ್ಜುನ್ ಅವರು ವಿಶಿಷ್ಟವಾಗಿ ನೀರಿನ ಮೇಲೆ ಯೋಗ ಮಾಡಿದ್ದಾರೆ. ಇವರಿಬ್ಬರು ಯೋಗ ಶಿಕ್ಷಕರಾಗಿದ್ದು ಹಲವರಿಗೆ ಆಸನಗಳನ್ನು ಹೇಳಿಕೊಡುತ್ತಿದ್ದಾರೆ. ಅಲ್ಲದೇ ನೀರಿನ 70 ರಿಂದ 80 ಯೋಗಾಸನಗಳನ್ನು ಮಾಡುವ ಇವರು 20 ವರ್ಷಗಳಿಂದ ನೆಲ ಮತ್ತು ಜಲದ ಮೇಲೆ ಯೋಗ ಮಾಡುತ್ತಿದ್ದಾರೆ.
ಪದ್ಮಾಸನ, ವೃಕ್ಷಾಸನ, ಚಕ್ರಾಸನ, ಗೋಮುಖಾಸನ, ಮರ್ಕಟಾಸನ, ವೀರಭದ್ರಾಸನ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಆಸನಗಳನ್ನು ನೀರಿನ ಮೇಲೆ ಸರಾಗವಾಗಿ ಮಾಡುತ್ತಾರೆ. ಹಿಗಾಗಿಯೇ ರಾಜ್ಯದ ವಿವಿಧ ಜಿಲ್ಲೆಯ ಹಳ್ಳಿ ಜನರಿಗೆ ಯೋಗಾ ಶಿಬಿರದಲ್ಲಿ ಆಸನಗಳನ್ನು ಹೇಳಿಕೊಡುತ್ತಿರುತ್ತಾರೆ. ಇದರಿಂದ ಇವರು ಜಲಯೊಗ ಸಾಧಕರೆಂದು ಖ್ಯಾತಿ ಪಡೆದಿದ್ದಾರೆ.