Recent Posts

Friday, November 22, 2024
ಸುದ್ದಿ

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಫಿಲೋಮಿನಾ ಕಾಲೇಜಿನ ಪದವಿ ಪೂರ್ವ ವಿದ್ಯಾರ್ಥಿಗಳು–ಕಹಳೆ ನ್ಯೂಸ್

ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಇದರ ಆಶ್ರಯದಲ್ಲಿ 66ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ 2022-23 ಕ್ರೀಡಾಕೂಟದಲ್ಲಿ ಪುತ್ತೂರಿನ ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನ 3 ವಿದ್ಯಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಿತೀಯ ವಿಜ್ಞಾನ ವಿಭಾಗದ ಮನ್ವಿತ್ ಕಣಜಾಲು 19 ವಯೋಮಾನದ ಬಾಲಕರ ಚೆಸ್ ಪಂದ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದು, ಇವರು ಮೊಟ್ಟೆತ್ತಡ್ಕ ನಿವಾಸಿ ದಾಮೋದರ ಕಣಜಾಲು ಮತ್ತು ರಶ್ಮಿ ಪಿ ಎಸ್ ದಂಪತಿಗಳ ಪುತ್ರನಾಗಿದ್ದು ಈತನಿಗೆ ಸತ್ಯಪ್ರಸಾದ್ ಕೋಟೆ, ಅರವಿಂದ ಶಾಸ್ತ್ರಿ ಮತ್ತು ಜಿ ಎಮ್ ಸ್ಯ್ಟಾನಿ ಜಿ ಎ ತರಬೇತಿ ನೀಡಿದ್ದಾರೆ.

ದ್ವಿತೀಯ ವಿಜ್ಞಾನ ವಿಭಾಗದ ತೃಪ್ತಿ ಎನ್ 19 ವಯೋಮಾನದ ಬಾಲಕಿಯರ ಯೋಗ ಸ್ಪರ್ಧೆಯಲ್ಲಿ 7 ಸ್ಥಾನವನ್ನು ಪಡೆದುಕೊಂಡಿದಿದ್ದು, ಇವರಿಗೆ ನವೀನ್ ಬಿ ಕೈಯೂರು ತರಬೇತಿ ನೀಡಿರುತ್ತಾರೆ. ಇವರು ಬೆಳ್ಳಾರೆ ನಿವಾಸಿ ಐತ್ತಪ್ಪ ನಾಯ್ಕ ಮತ್ತು ಪದ್ಮಲ ಕುಮಾರಿ ದಂಪತಿಗಳ ಪುತ್ರಿಯಾಗಿದ್ದಾಳೆ.

ದ್ವಿತೀಯ ವಾಣಿಜ್ಯ ವಿಭಾಗದ ವರ್ಷಾ 19 ವಯೋಮಾನದ ಬಾಲಕಿಯರ ಅಥ್ಲೆಟಿಕ್ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ 7ನೇಸ್ಥಾನವನ್ನು ಪಡೆದುಕೊಂಡಿರುತ್ತಾರೆ ಇವರು ಪಾಂಗ್ಲಾಯಿ ನಿವಾಸಿ ಸುಂದರ ಗೌಡ ಮತ್ತು ವಾರಿಜ ದಂಪತಿಗಳ ಪುತ್ರಿಯಾಗಿರುತ್ತಾರೆ.
ಸಾಧನೆಗೃದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ರವರು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದಎಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.