ಮಂಗಳೂರು ವಿವಿ ಅಂತರ್ ವಲಯ ಮಟ್ಟದ ಪಂದ್ಯಾವಳಿ; ಸಂತ ಫಿಲೋಮಿನಾ ಕಾಲೇಜಿಗೆ ರನ್ನರ್ಸ್ ಅಪ್ ಪ್ರಶಸ್ತಿ –ಕಹಳೆ ನ್ಯೂಸ್
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣದ ಮ್ಯಾಟ್ ಅಂಕಣದಲ್ಲಿ ನಡೆದ 2022-23ನೇ ಸಾಲಿನ ಅಂತರ್ ವಲಯ ಪಂದ್ಯಾವಳಿಯಲ್ಲಿ ಮಂಗಳೂರು ವಲಯದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ರನ್ನರ್ಸ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ಟ್ರೋಫಿಗಾಗಿ ನಡೆದ ಪಂದ್ಯಾವಳಿಯ ಅಂತಿಮ ಪಂದ್ಯವು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿ ಹಾಗೂ ಉಜಿರೆಯ ಎಸ್. ಡಿ. ಎಂ. ಕಾಲೇಜುಗಳ ನಡುವೆ ನಡೆದಿದೆ. ಈ ಪಂದ್ಯದಲ್ಲಿ ಎಸ್. ಡಿ. ಎಂ. ಕಾಲೇಜು ಜಯ ಗಳಿಸಿದ್ದು, ಸಂತ ಫಿಲೋಮಿನಾ ಕಾಲೇಜು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ಕಾಯ್ದುಕೊಂಡ ಸಂತ ಫಿಲೋಮಿನಾ ಕಾಲೇಜು ತಂಡವು ಅರ್ಹತಾ ಸುತ್ತಿನಲ್ಲಿ ವಾಮದಪದವು ಪ್ರಥಮ ದರ್ಜೆ ಕಾಲೇಜನ್ನು, ಕ್ವಾರ್ಟರ್ ಫೈನಲ್‌ನಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜನ್ನು ಹಾಗೂ ಸೆಮಿಫೈನಲ್‌ನಲ್ಲಿ ಮಂಗಳೂರು ವಿವಿ ಕ್ಯಾಂಫಸ್ ತಂಡವನ್ನು ಮಣಿಸಿ ಅಂತಿಮ ಹಂತಕ್ಕೆ ಲಗ್ಗೆ ಇಟ್ಟಿತ್ತು. ತಂಡದ ಆಟಗಾರರಾದ ನಾಸಿರ್ ಹಾಗೂ ಸುಹಾನ್‌ರವರುಪಂದ್ಯಾವಳಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಇನ್ನೂ ಈ ತಂಡಕ್ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ ಹಾಹೂ ಕಬಡ್ಡಿ ಕೋಚ್ ಹಬೀಬ್ ಮಾಣಿ ತರಬೇತಿ ನೀಡಿರುತ್ತಾರೆ. ಉತ್ತಮ ಪ್ರದರ್ಶನ ನೀಡಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆದ ತಂಡದ ಸದಸ್ಯರನ್ನು ಹಾಗೂತರಬೇತುದಾರರನ್ನು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೊರವರು ಅಭಿನಂದನೆ ಸಲ್ಲಿಸಿದ್ದಾರೆ.