Thursday, January 23, 2025
ಸುದ್ದಿ

ಯುವಕನ ಮೇಲೆ ಹಲ್ಲೆ ಆರೋಪ : ಖ್ಯಾತ ನಟ ಪ್ರಜ್ವಲ್ ವಿರುದ್ದ ಕೇಸ್ ದಾಖಲು –ಕಹಳೆ ನ್ಯೂಸ್

ಯುವಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಅಮೃತವರ್ಷಿಣಿ, ಅಣ್ಣ-ತಂಗಿ ಧಾರವಾಹಿ ಖ್ಯಾತಿಯ ಪ್ರಜ್ವಲ್ ಮೇಲೆ ಆರ್.ಆರ್ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಚೇತನ್ ಹಲ್ಲೆಗೊಳಗಾದ ಯುವಕನಾಗಿದ್ದು, ಆರ್.ಆರ್ ನಗರದ ಅಮೃತ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಸ್ನೇಹಿತರ ಜೊತೆ ಕಿರುತೆರೆ ನಟ ಪ್ರಜ್ವಲ್ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಪ್ರಜ್ವಲ್ ಜೊತೆಗಿದ್ದ ಮನು ಎಂಬುವರನ್ನು ಚೇತನ್ ಕರೆಯಲು ಮುಂದಾಗಿದ್ದು, ಇದರಿಂದ ಕೋಪಿಸಿಕೊಂಡ ಪ್ರಜ್ವಲ್ ಮತ್ತು ಆತನ ಸ್ನೇಹಿತರು ಸೇರಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ಈ ಬಗ್ಗೆ ಸ್ವತಃ ಚೇತನ್ ಅವರೇ ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.