Wednesday, January 22, 2025
ಸುದ್ದಿ

ಮತಾಂತರ ನಿಷೇಧ ಕಾಯ್ದೆ ಹಿಂಪಡೆದ ಸರ್ಕಾರದ ವಿರುದ್ಧ ಮೂಡಬಿದಿರೆಯಲ್ಲಿ ಹಿಂದೂ ಪರಿಷತ್-ಬಜರಂಗದಳ ಪ್ರತಿಭಟನೆ – ಕಹಳೆ ನ್ಯೂಸ್

 ಕರ್ನಾಟಕ ಸರಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ತೀರ್ಮಾನಿಸಿರುವುದನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್-ಬಜರಂಗದಳದಿoದ ಮೂಡಬಿದಿರೆ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ, ದೇವಿ ಪ್ರಸಾದ್ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಬೆಲೆ ಏರಿಕೆ ಸಮಸ್ಯೆ ಇದೆ. ಸಿದ್ದರಾಮಯ್ಯ ಸರಕಾರ ಐದು ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗದೆ ಇರುವುದರಿಂದ, ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯಲು ಹೊರಡುವ ಮೂಲಕ ರಾಜ್ಯದ ಜನರ ದಿಕ್ಕನ್ನು ತಪ್ಪಿಸಲು ಹೊರಟಿದೆ. ಆದರೆ ಯಾವುದೇ ಪರಿಸ್ಥಿತಿ ಬಂದರೂ ದೇಶದಲ್ಲಿ ಮತ್ತೊಮ್ಮೆ ರಾಷ್ಟಾಂತರಕ್ಕೆ ಅವಕಾಶ ಸಿಗಲು ವಿಶ್ವಹಿಂದೂ ಪರಿಷತ್, ಬಜರಂಗದಳ ಬಿಡುವುದಿಲ್ಲ. ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯುವ ಮೂಲಕ ಅನ್ಯಧರ್ಮಿಯರಿಂದ ಹಿಂದೂ ಧರ್ಮವನ್ನು ಧಮನ ಮಾಡಲು ಹೊರಟರೆ ಬೃಹತ್ ಹೋರಾಟವನ್ನು ಮಾಡುವೆವು ಎಂದು ಎಚ್ಚರಿಸಿದರು.

ವಿಶ್ವ ಹಿಂದೂ ಪರಿಷತ್ ಕಾರ್ಯಧ್ಯಕ್ಷ ಶ್ಯಾಮ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.. ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ಸುಚೇತನ್ ಜೈನ್, ಬಜರಂಗದಳ ಮೂಡುಬಿದಿರೆ ಪ್ರಖಂಡದ ತಾಲೂಕು ಸಂಯೋಜಕ ಅಭಿಲಾಷ್ ಅರ್ಜುನಾಪುರ, ಮೂಡುಬಿದಿರೆ ತಾಲೂಕು ಸಾಪ್ತಾಹಿಕ್ ಪ್ರಮುಖ್ ಪ್ರವೀಣ್ ಬೋರುಗುಡ್ಡೆ, ತಾಲೂಕು ಅಖಾಡ ಪ್ರಮುಖ್ ಸಂಜಯ್ ಹೆಗ್ಡೆ, ತಾಲೂಕು ಸತ್ಸಂಗ ಪ್ರಮುಖ್ ಶೇಖರ್ ನೆಲ್ಲಿಗುಡ್ಡೆ, ಬಜರಂಗದಳ ನಗರ ಸಂಯೋಜಕ ವಿಜೇಶ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.