Tuesday, January 21, 2025
ಸುದ್ದಿ

ಕಲ್ಲಡ್ಕದಲ್ಲಿ ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ : ಗಂಭೀರವಾಗಿ ಗಾಯಗೊಂಡ ಇಸುಬು ಬ್ಯಾರಿ – ಕಹಳೆ ನ್ಯೂಸ್

ಬಂಟ್ವಾಳ : ರಸ್ತೆ ಬದಿ ನಿಂತಿದ್ದ ವ್ಯಕ್ತಿಯೋರ್ವನಿಗೆ ಕೆಎಸ್‌ಆರ್‌ಟಿಸಿ. ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ಕಲ್ಲಡ್ಕ ಎಂಬಲ್ಲಿ ನಡೆದಿದೆ.ಪುತ್ತೂರು ಬೆಟ್ಟಂಪಾಡಿ ತಲಪ್ಪಾಡಿ ನಿವಾಸಿ ಇಸುಬು ಬ್ಯಾರಿ (79) ಗಾಯಗೊಂಡವರು.


ಪುತ್ತೂರಿನಿoದ ಮಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯಲ್ಲಿ ನಿಂತುಕೊoಡಿದ್ದ ಇಸುಬು ಬ್ಯಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಇಸುಬು ಬ್ಯಾರಿ ನೆಲಕ್ಕೆ ಬಿದ್ದು, ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ತಕ್ಷಣ ಇವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಲಾಗಿದೆ, ಚಿಂತಾಜನಕ ಸ್ಥಿತಿಯಲ್ಲಿಯರುವ ಅವರು ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಸುಬು ಬ್ಯಾರಿ ಅವರ ಮಗಳನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟಿದ್ದು, ಮಗಳ ಮನೆಗೆ ಬಂದವರು ಸಂಬoಧಿಯೊರ್ವರ ಮೆಹಂದಿ ಕಾರ್ಯಕ್ರಮಕ್ಕೆಂದು ಕಲ್ಲಡ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು