Recent Posts

Tuesday, November 26, 2024
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ವಾರ್ಷಿಕ ಕಾರ್ಯಕ್ರಮ ʼಕೆಮ್ಮಿಂಗಲ್ʼ ಹಾಗೂ ಅತಿಥಿ ಉಪನ್ಯಾಸ –ಕಹಳೆ ನ್ಯೂಸ್

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗಾಗಿ ʼಕೆಮ್ಮಿಂಗಲ್ʼ ಎಂಬ ಹೆಸರಿನಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಬೆಳ್ಳಿ ಹಬ್ಬ ಸಭಾಭವನದಲ್ಲಿ ನಡೆದಿದೆ.

ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ್ಯ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೊರವರು ಮಾತಾನಾಡಿ, ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮತ್ತು ಯಾವುದೇ ಶೈಕ್ಷಣಿಕ ವಿಷಯದ ಆಯ್ಕೆಯ ಪ್ರಶ್ನೆ ಬಂದಾಗ ಅದರ ಮೇಲಿರುವ ಒಲವು ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂ| ಸ್ಟ್ಯಾನಿ ಪಿಂಟೋರವರು ಮಾತನಾಡಿ ಹಿಂದೊಮ್ಮೆ ವಿಜ್ಞಾನ ಪಠ್ಯದ ಸಣ್ಣಭಾಗವಾಗಿದ್ದ ವಿಷಯಗಳು ಇಂದು ವಿಶೇಷ ಪರಿಣತಿಯ ಕ್ಷೇತ್ರಗಳಾಗಿ ಬದಲಾಗುತ್ತಿವೆಯೆಂದು ತಿಳಿಸಿ ಪ್ರತಿಯೊಂದು ವಿಚಾರದಲ್ಲಿಯೂ ಆಳವಾಗಿಅಭ್ಯಸಿಸುವ ಅಗತ್ಯವಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಸಾಯನಿಕ ವಿಜ್ಞಾನದಲ್ಲಿ ಸುಧಾರಿತ ವಸ್ತುಗಳು ಇತ್ತೀಚಿನ ಬೆಳವಣಿಗೆಗಳು ಮತ್ತು ಉಪಯೋಗಗಳು ಎಂಬ ವಿಷಯದ ಮೇಲೆ ಅತಿಥಿ ಉಪನ್ಯಾಸವನ್ನು ಏರ್ಪಡಿಸಲಾಯಿತು. ಕರ್ನಾಟಕ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ಸುರತ್ಕಲ್ ಇಲ್ಲಿನ ಸಂಶೋಧನಾ ವಿದ್ಯಾರ್ಥಿನಿ ಕುಮಾರಿ ನೇತ್ರಾವತಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ತಮ್ಮ ಉಪನ್ಯಾಸದಲ್ಲಿ ಅವರು ನ್ಯಾನೊ ತಂತ್ರಜ್ಞಾನ ಬಳಸಿ ಹಲವು ಸುಧಾರಿತ ವಸ್ತುಗಳನ್ನು ಹೇಗೆ ತಯಾರಿಸಬಹುದು. ಹೀಗೆ ತಯಾರಿಸಿದ ಕೃತಕ ಪೊರೆಯ ಸಹಾಯದಿಂದ ಮಲಿನ ನೀರನ್ನು ಹೇಗೆ ಶುದ್ಧೀಕರಿಸಬಹುದು, ನ್ಯಾನೊ ತಂತ್ರಜ್ಞಾನದ ಮೂಲಕ ತಯಾರಾದ ಸೂಜಿ ಮದ್ದುಗಳನ್ನು ಹೇಗೆ ಶರೀರದ ಅವಯವಗಳಿಗೆ ಹೇಗೆ ನಿಖರವಾಗಿ ತಲುಪಿಸಬಹುದು ಎಂದು ವಿವರಿಸಿದರು.

2021-22 ನೇ ಸಾಲಿನ ವಿಶ್ವವಿದ್ಯಾನಿಲದ ಪರೀಕ್ಷೆಗಳಲ್ಲಿ ರ‍್ಯಾಂಕ್ ವಿಜೇತ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಧೀರಜ್ ಮತ್ತು ಶ್ರೀಶ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಕೆಮ್ಮಿಂಗಲ್ ಕಾರ್ಯಕ್ರಮದ ಅಂಗವಾಗಿ ವಿಭಾಗದ ವತಿಯಿಂದ ಆಯೋಜಿಸಲಾದವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಅಭಿಜ್ಞಾ ಮತ್ತು ಬಳಗ ಪ್ರಾರ್ಥಿಸಿದರು. ವಿಭಾಗಮುಖ್ಯಸ್ಥರಾದ ಡಾ| ಪಿ.ಎಸ್ ಕೃಷ್ಣ ಕುಮಾರ್ ಅತಿಥಿಗಳ ಸ್ವಾಗತ ಹಾಗೂ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಅಭಿನಂದನ ಕಾರ್ಯಕ್ರಮ ನೆರವೇರಿಸಿದರು. ಡಾ| ಮಾಲಿನಿ ಕೆ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು ಹಾಗೂ ವಂದನಾರ್ಪಣೆಗೈದರು. ಡಾ| ಎಡ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.