Recent Posts

Sunday, January 19, 2025
ಪುತ್ತೂರುಶಿಕ್ಷಣಸಿನಿಮಾಸುದ್ದಿ

ಪಥ ಕಿರುಚಿತ್ರಕ್ಕೆ ರಾಜ್ಯ ಮಟ್ಟದ ಬೆಸ್ಟ್ ಸಿನಿಮಾಟೋಗ್ರಫಿ ಅವಾರ್ಡ್- ಕಹಳೆ ನ್ಯೂಸ್

ಪುತ್ತೂರು: ಜೂನ್.23: ಎ.ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮತ್ತು ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಅಚಲ್ ಉಬರಡ್ಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕನ್ನಡ ಕಿರುಚಿತ್ರ ಪಥ ಕ್ಕೆ ರಾಜ್ಯ ಮಟ್ಟದ ‘ಬೆಸ್ಟ್‌ ಸಿನಿಮಾಟೋಗ್ರಫಿ ಪ್ರಶಸ್ತಿ’ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಉತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಯೋಶಿತ್ ಬನ್ನೂರು ಈ ಚಿತ್ರದ ಛಾಯಾಗ್ರಹಣ ವನ್ನು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮನ್ ಶೆಟ್ಟಿ ಸಂಕಲನ ಮಾಡಿದ್ದು ಅಶ್ವಿನ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿರುತ್ತಾರೆ

ಪಥ ಕಿರುಚಿತ್ರದ ನಾಯಕರಾಗಿ ಅಚಲ್ ಉಬರಡ್ಕ ಹಾಗೂ ನಾಯಕಿಯಾಗಿ ವಿಶ್ರಿತ ಆಚಾರ್ಯ ಇವರು ಬಣ್ಣ ಹಚ್ಚಿದ್ದು, ಶರತ್ ಕೆ ಎನ್, ಸ್ವಸ್ತಿಕ್ ಶೆಟ್ಟಿ, ಅರಹಂತ್ ಜೈನ್, ಗಗನ್ ದೀಪ್, ಮಂಜುನಾಥ್ ಜೋಡುಕಲ್ಲು ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರವು ಸಾಮಾಜಿಕ ಕಳಕಳಿಯನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುವುದರ ಪರಿಣಾಮ ಹಾಗೂ ಹೆಲ್ಮೆಟ್ ಧರಿಸದೇ ಇರುವುದರಿಂದ ಆಗುವ ಸಮಸ್ಯೆಗಳ ಬಗೆಗೆ ಜಾಗೃತಿಯನ್ನು ಮೂಡಿಸುವ ಪ್ರಯತ್ನವೆ ಚಿತ್ರದ ಕಥಾವಸ್ತುವಾಗಿದೆ..

ವಿಶೇಷ ಏನೆಂದರೆ ಈ ಕಿರುಚಿತ್ರವನ್ನು ಸಂಪೂರ್ಣವಾಗಿ ಮೊಬೈಲ್ ನಲ್ಲಿಯೇ ಚಿತ್ರೀಕರಿಸಿ ಮತ್ತು ಸಂಕಲನವನ್ನು ಮಾಡಿರುವುದು ವಿಶೇಷ…

 

ಪಥ ಕಿರುಚಿತ್ರವು 24/06/2023 ರಂದು ವಿವೇಕಾನಂದ ಕಾಲೇಜಿನಲ್ಲಿ ದೀಪಕ್ ರೈ ಪಾಣಾಜೆ ಇವರ ಸಮ್ಮುಖದಲಿ ಬಿಡುಗಡೆಗೊಳ್ಳಲಿದೆ..