ಕುರ್ಕಾಲು ಅಭಿಮಾನಗಳು ಇವರ ವತಿಯಿಂದ ಇಂದು ದಿನಾಂಕ 23-06-2023 ರಂದು ಗ್ರ್ಯಾಂಡ್ ಬೇ ಸಭಾಂಗಣದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಅವರಿಗೆ ಅಭಿನಂದನಾ ಸಮಾರಂಭ ನೆರವೇರಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರು, ಹಿರಿಯರಾದ ದಿನಕರ್ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶಿವರಾಮ ಶೆಟ್ಟಿ, ಕುರ್ಕಾಲು ಪಟ್ಟ ಚಾವಡಿಯ ಮುಖ್ಯಸ್ಥರಾದ ದಿನೇಶ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.