ಮಂಗಳೂರು: ಉಳ್ಳಾಲ ವ್ಯಾಪ್ತಿಯ ತೌಡುಗೋಳಿ ಕ್ರಾಸ್‌ನ ನರಿಂಗಾನ ಗ್ರಾ.ಪಂ. ಬಳಿ ಖಾಸಗಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಮಹಿಳೆಯೊಬ್ಬರು ಅಪಘಾತದಿಂದ ಪಾರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿರುದ್ಧವೂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಈ ಕುರಿತು ಮಾಹಿತಿ ನೀಡಿದ್ದು, ಕರ್ನಾಟಕ ಸಂಚಾರ ನಿಯಂತ್ರಣ ನಿಯಮಗಳು 1979ರಡಿ ಪ್ರಕರಣ ದಾಖಲಿಸಿ, ನಿರ್ಲಕ್ಷ್ಯತನದಿಂದ ರಸ್ತೆ ದಾಟಿದ್ದಕ್ಕೆ ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸೆಕ್ಷನ್ 13ರ ಸಂಚಾರ ನಿಯಂತ್ರಣ ನಿಯಮಗಳು ಹಾಗೂ ಸೆಕ್ಷನ್ 92ಜಿ ಕೆಪಿ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲು ಅವಕಾಶ ಇರುವ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.