ಪ್ರಖ್ಯಾತ ಬಿಂದು ಕಂಪನಿಯಿಂದ ಮೂರು ಸ್ನಾಕ್ ಅಪ್ ಉತ್ಪನ್ನ ಮಾರುಕಟ್ಟೆಗೆ ಪರಿಚಯ; ಖ್ಯಾತ ನಟ ರಮೇಶ್ ಅರವಿಂದ್ ಅವರಿಂದ ಬಿಡುಗಡೆ –ಕಹಳೆ ನ್ಯೂಸ್
ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ಫುಡ್ & ಬೆವರೇಜಸ್ ಕಂಪನಿಯಾದ ಪುತ್ತೂರು ಮೂಲದ ಎಸ್ ಜಿ ಕಾರ್ಪರೇಟ್ಸ್ (ಬಿಂದು) ಕಂಪನಿಯಿಂದ ಮೂರು ಸ್ನಾಕ್ ಅಪ್ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಬಿಂದು ಪ್ಯಾಕೇಜ್ ಡ್ರಿಂಕಿಂಗ್ ವಾಟರ್ , ಫಿಝ್ ಜೀರಾ ಮಸಲಾ, ಸಿಪ್ ಅನ್ ಉತ್ಪನ್ನಗಳ ಮೂಲಕ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಅಧಿಪತ್ಯ ಹೊಂದಿರುವ ಬಿಂದು ಕಂಪನಿ ಸ್ನಾಕ್ ಅಪ್ ಉತ್ಪನ್ನಗಳನ್ನು ಹೊಂದಿದೆ.
ಸ್ನಾಕ್ ಅಪ್ ಮಸಲಾ ಮುಂಗ್ ದಾಲ್, ಸ್ನಾಕ್ ಅಪ್ ಚಾಕಲೆಟ್ ಕೋನ್, ಸ್ನಾಕ್ ಅಪ್ ಪಸ್ತಾ ಪಿಂಗರ್ ಎನ್ನುವ ಮೂರು ಸ್ನಾಕ್ ಅಪ್ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ನಟ ರಮೇಶ್ ಅರವಿಂದ್ ಬಿಡುಗಡೆಗೊಳಿಸಿದ್ದಾರೆ.
ಬೆಂಗಳೂರಿನ ಗೋಲ್ಡನ್ ಪಾಮ್ ರೆಸರ್ಟ್ನಲ್ಲಿ ನಟ ರಮೇಶ್ ಬಿಡುಗಡೆಗೊಳಿಸಿ, ಬಿಂದು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಎಸ್.ಜಿ ಕಾರ್ಪರೇಟ್ಸ್ ಸಂಸ್ಥೆಯ ಎಂ.ಡಿ ಸತ್ಯಶಂಕರ್ ಭಟ್ ಮಾತನಾಡಿ , 2026ರೊಳಗೆ ಸ್ನಾಕ್ ಅಪ್ ವಿಭಾಗ 100 ಕೋಟಿ ವ್ಯವಹಾರದ ಗುರಿ ಹೊಂದಿದೆ ಎಂದರು.