ಭಾರತದಲ್ಲಿ ಕ್ರಿಕೆಟಿಗನರನ್ನು ದೇವರಂತೆ ಆರಾಧಿಸುತ್ತಾರೆ. ಸ್ಕೂಲಿಗೆ ಹೋಗುವ ಚಿಕ್ಕ ಮಗುವಿನಿಂದ ಹಿಡಿದು ಹರಳಿ ಕಟ್ಟೆಯಲ್ಲಿ ಕೂತು ಹರಟೆ ಹೊಡೆಯುವ ವಯಸ್ಕರಿಗೂ ಕ್ರಿಕೆಟ್ ಹುಚ್ಚಿದ್ದು, ಈ ಕ್ರೇಜ್ ಅನ್ನ ಡಬಲ್ ಮಾಡಿದ್ದು, ಕ್ರೇಜಿ ಸ್ಟಾರ್ ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿ ಈ ದಿಗ್ಗಜನಿಗೆ ಬರೀ ಫ್ಯಾನ್ಸ್ ಅಷ್ಟೇ ಅಲ್ಲ, ಕ್ರೇಜಿ ಫ್ಯಾನ್ಸ್ ಗಳಿದ್ದಾರೆ. ಅಭಿಮಾನಿಗಳ ಪಾಲಿಗೆ ಕೊಹ್ಲಿನೇ ದೇವರು, ಕೊಹ್ಲಿನೇ ಉಸಿರು. ಇವರು ತೋರಿಸುವ ಪ್ರೀತಿಗೆ ಬೆಲೆ ಕಟ್ಟಲಾಗದು. ಇಂತವರ ಪ್ರೀತಿ ಸಂಪಾದಿಸಿದ ಕೊಹ್ಲಿ ನಿಜಕ್ಕೂ ಪುಣ್ಯವಂತರಾಗಿದ್ದಾರೆ. ಹೌದು ಅಭಿಮಾನಿಯ ಕೈಬೆರಳಲ್ಲಿ ಕೊಹ್ಲಿ ಭಾವಚಿತ್ರ ಅರಳಿದ್ದು, ಕಿಂಗ್ ಕೊಹ್ಲಿಗೆ ಎಂತೆಂತ ಫ್ಯಾನ್ಸ್ ಇದ್ದಾರೆ ಅನ್ನೋದಕ್ಕೆ ಇದೊಂದು ಚಿತ್ರ ಸಾಕು. ಅಭಿಮಾನಿಯೊಬ್ಬ ಪೇಟಿಂಗ್ ಮೂಲಕ ತನ್ನ ದಿಲ್ ಕಾಸ್ ಬಾಸ್ ಕಲಾಕೃತಿ ಸಿದ್ಧಪಡಿಸಿದ್ದಾನೆ.
ಇಲ್ಲೊಬ್ಬ ಅಭಿಮಾನಿ ಮೈಪೂರ್ತಿ ವಿರಾಟ್ ಕೊಹ್ಲಿಯ ಟ್ಯಾಟೂ ಬಿಡಿಸುವ ಮೂಲಕ ಕೊಹ್ಲಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಬಿಹಾರದ ಅಭಿಮಾನಿಯೊಬ್ಬ ಮೈತುಂಬಾ 15 ಟ್ಯಾಟೋಸ್‌ಗಳನ್ನು ಹಾಕಿಸಿದ್ದಾನೆ. ಈತನ ಅಭಿಮಾನಕ್ಕೆ ಮರುಳಾಗಿದ್ದ ಕೊಹ್ಲಿ, ಪಿಂಟೋರನ್ನ ಭೇಟಿಯಾಗಿ ಪೋಟೋ ತೆಗೆಸಿಕೊಂಡಿದ್ದಾರೆ.