1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಜು. 30ರೊಳಗೆ ಸಿಗಲಿದೆ ‘ಶೂ ಮತ್ತು ಸಾಕ್ಸ್’ -ಕಹಳೆ ನ್ಯೂಸ್
ಬೆಂಗಳೂರು: 1 ರಿಂದ 10ನೇ ತರಗತಿಯ ಎಲ್ಲ ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯಮಕ್ಕಳಿಗೆ ಒಂದು ಜೊತೆ ಶೂ ಮತ್ತು ಸಾಕ್ಸ್ ಖರೀದಿ ಪ್ರಕ್ರಿಯೆನ್ನು ಆರಂಭ ಮಾಡುವಂತೆ ಇಲಾಖೆಯು ಸಂಬಂಧಪಟ್ಟ ಎಸ್.ಡಿಎಂಸಿಗಳಿಗೆ ಸೂಚನೆ ನೀಡಿದೆ. 1ರಿಂದ 5ನೇ ತರಗತಿಗೆ 265 ರೂ., 6ರಿಂದ 8ನೇ ತರಗತಿಗೆ 295 ರೂ. ಮತ್ತು 9 ಮತ್ತು 10ನೇ ತರಗತಿಗೆ 325 ರೂ. ನಿಗದಿ ಮಾಡಿದೆ.
ಈ ಯೋಜನೆ ಅನುಷ್ಠಾನಕ್ಕೆ ಸೇವಾ ದೃಷ್ಟಿಯಿಂದ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು, ಹೆಚ್ಚುವರಿ ಧನ ಸಹಾಯಮಾಡಿದಲ್ಲಿ ಅದನ್ನೂ ಬಳಸಿಕೊಂಡು ಉತ್ತಮ ಗುಣಮಟ್ಟದ ಖರೀದಿಸಬಹದು ಎಂದು ತಿಳಿಸಿದೆ.
ಆಯಾ ಬಿಇಒಗಳು ಕೂಡಲೇ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆಆಯುಕ್ತರು ಸೂಚನೆ ನೀಡಿದ್ದಾರೆ. ಖರೀದಿ ಪ್ರಕ್ರಿಯೆಯನ್ನು ಎಸ್ ಡಿಎಂಸಿ ಸಭೆ ನಡೆಸಿ ದರ ಪಟ್ಟಿಗಳನ್ನು ಆಹ್ವಾನ ಮಾಡಿ ತುಲನಾತ್ಮಕ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಕಾರ್ಯದೇಶ ನೀಡಬೇಕು ಅಂತ ತಿಳಿಸಲಾಗಿದೆ.