Recent Posts

Monday, January 20, 2025
ಮೂಡಬಿದಿರೆಶಿಕ್ಷಣಸುದ್ದಿ

ಮೂಡುಬಿದಿರೆಯಲ್ಲಿ ಜುಲೈ 14,ರಿಂದ16ರವರೆಗೆ ಬೃಹತ್ ಹಲಸುಮೇಳ- ಕಹಳೆ ನ್ಯೂಸ್

ಮೂಡುಬಿದಿರೆ:ಮೊಟ್ಟ ಮೊದಲ ಬಾರಿಗೆ ಮೂಡುಬಿದಿರೆಯ ಆಳ್ವಾಸ್ ಸಮೂಹ ಸಂಸ್ಥೆಗಳು, ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ಹಲಸು ಮೇಳವನ್ನು ಮೂರು ದಿನಗಳ ಕಾಲ ಆಯೋಜಿಸಿದೆ.

ಸೌಟ್ಸ್ ಗೈಡ್ ಕನ್ನಡ ಭವನದಲ್ಲಿ ಜುಲೈ 14,15 ಮತ್ತು 16ರಂದು ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ಬೃಹತ್ ಹಲಸುಮೇಳ ನಡೆಯಲಿದ್ದು ಈಗಾಗಲೇ ಸಿದ್ದತೆಗಳು ಆರಂಭಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲಸಿನ ಮೌಲ್ಯವರ್ಧನೆ, ಸಾಧ್ಯತೆಗಳನ್ನು ಸ್ಪಷ್ಟವಾಗಿ ನಿರೂಪಿಸುವ ಕಾರ್ಯ ಇಲ್ಲಾಗಲಿದೆ. ಹಲಸಿನ ವಿವಿಧ ಸಾಂಪ್ರದಾಯಿಕ ಖಾದ್ಯ, ಅಡುಗೆಗಳು ಲಭ್ಯವಾಗಲಿವೆ. ವಿವಿಧ ಜಾತಿಯ ಹಲಸುಗಳ ಪ್ರದರ್ಶನ, ಆಹಾರೋತ್ಸವವೂ ನಡೆಯಲಿದೆ. ದೇಶ ವಿದೇಶಗಳ ಹಣ್ಣು, ಮಾವಿನ ಉತ್ಸವವೂ ನಡೆಯಲಿದೆ. ಜಿಲ್ಲೆಯ ಎಲ್ಲ ಕೃಷಿಕರಲ್ಲಿ ಲಭ್ಯವಿರುವ ಹೊಸ ಹೊಸ ಹಣ್ಣುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿವಿಧ ಜಾತಿಯ ಗಿಡಗಳು, ಹಣ್ಣಿನಗಿಡಗಳು, ಇವೆಲ್ಲವೂ ಈ ಮೇಳದ ಮೂಲಕ ಜನತೆಗೆ ಲಭ್ಯವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು