Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಂತಿ ಸಭೆ – ಕಹಳೆ ನ್ಯೂಸ್

ಬಂಟ್ವಾಳ: ಜೂನ್ 29 ರಂದು ನಡೆಯಲಿರುವ ಬಕ್ರೀದ್ ಹಾಗೂ ಮುಂಬರುವ ದಿನಗಳಲ್ಲಿ ಬರುವ ಹಬ್ಬಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಸಮಾಜದ ಪ್ರಮುಖ ನಾಯಕರ ಜೊತೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ ಶಾಂತಿ ಸಭೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಡಿಷನಲ್ ಎಸ್.ಪಿ. ಧರ್ಮಪ್ಪ ಎಂ.ಎನ್. ಅವರು ಮಾತನಾಡಿ ಹಬ್ಬದ ಸಂದರ್ಭದಲ್ಲಿನ ಖುಷಿ ಸಮಾಜದ ಇತರರಿಗೆ ತೊಂದರೆಯಾಗದಂತೆ ನಡೆಯಬೇಕು ಈ ಬಗ್ಗೆ ಸಮಾಜದ ನಾಯಕರು ನಿಗಾವಹಿಸುವಂತೆ ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾನೂನು ವ್ಯಾಪ್ತಿಯಲ್ಲಿ ಆಚರಣೆ ನಡೆಸಿ, ಶಾಂತಿ ಸಹಬಾಳ್ವೆಗೆ ಹೆಚ್ಚಿನ ಒತ್ತುನೀಡಿ, ಯುವಕರಿಗೆ ಬುದ್ದಿವಾದ ಹೇಳಿ ,ಕಾನೂನು ವಿರುದ್ದವಾಗಿ ಸಮಾಜಘಾತುಕ ಘಟನೆಗಳು ನಡೆದರೆ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕುತ್ತೇವೆ.

ಅನಗತ್ಯವಾಗಿ ಮೈಮೇಲೆ ಕೇಸು ಹಾಕಿಸಿಕೊಂಡು ಜೀವನ ಹಾಳುಮಾಡಬೇಡಿ ಎಂದು ಯುವಕರಿಗೆ ಬುದ್ದಿವಾದ ಹೇಳಿ ಅವರು ಖಡಕ್ ಆಗಿ ತಿಳಿಸಿದರು.
ಪೋಲೀಸರ ಜೊತೆಗೆ ಸಹಕಾರ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈ ಜೋಡಿಸುವಂತೆ ಮನವಿ ಮಾಡಿದರು.

ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆಗಳು ನಡೆದರೆ ನಾವು ಸುಮ್ಮನೆ ಬಿಡುವುದಿಲ್ಲ, ಅಯಾ ವ್ಯಾಪ್ತಿಯಲ್ಲಿ ನಡೆಯುವ ಘಟನೆಗಳ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿ. ಅದರ ಬದಲು ನೈತಿಕ ಪೋಲಿಸ್ ಕೆಲಸ ಮಾಡಿದರೆ ಪೋಲಿಸ್ ಸುಮ್ಮನಿರಲ್ಲ ಎಂದು ನಗರ ಠಾಣಾ ಪೋಲಿಸ್ ಇನ್ಸ್ ಪೆಕ್ಟರ್ ವಿವೇಕಾನಂದ ತಿಳಿಸಿದರು.

ಸೋಷಿಯಲ್‌ ಮೀಡಿಯಾದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದ್ದು,ಸಮಾಜದಲ್ಲಿ ಅಶಾಂತಿ ತಲೆದೋರುವ ಮೆಸೇಜ್ ಗಳು ಬಂದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಮಾತನಾಡಿ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಿ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ, ಅಂತಹ ಯಾವುದೇ ಘಟನೆಗಳಾದರೂ ಪೋಲೀಸ್ ಕ್ರಮ ಕೈಗೊಳ್ಳುತ್ತಾರೆ.

ಪ್ರಸ್ತುತ ದಿನಗಳಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇದುವ ಬಗ್ಗೆ ದೂರುಗಳು ಬರುತ್ತಿವೆ. ದಯವಿಟ್ಟು ಅಂತಹ ಪ್ರಕರಣಗಳ ಬಗ್ಗೆ ಮಾಹಿತಿ ಸಿಕ್ಕದರೆ ಪೋಲೀಸರಿಗೆ ತಿಳಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರ ಪೋಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ.ಕಲೈಮಾರ್, ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ.ಸಂಜೀವ, ಸಭೆಯಲ್ಲಿ ಯುವ ವಕೀಲ ಪ್ರಸಾದ್ ಕುಮಾರ್, ಪ್ರಮುಖರಾದ ಕೃಷ್ಣಕುಮಾರ್ ಪೂಂಜಾ, ಮಾಜಿ.ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಗ್ರಾ.ಪಂ.ಸದಸ್ಯ ರಮ್ಲಾನ್ ಸಹಿತ ಅನೇಕ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು.